Advertisement

ಕೋವಿಡ್ ವಾರಿಯರ್ಸ್‌ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ

03:34 PM Apr 23, 2020 | Naveen |

ಅಜ್ಜಂಪುರ: ಕೋವಿಡ್ ತಡೆಗಟ್ಟಲು ಕೆಲಸ ನಿರ್ವಹಿಸುತ್ತಿರುವ ದಾದಿಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಕ್ಕೆ ತಡೆಯೊಡ್ಡುವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಎಸ್‌. ಸುರೇಶ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣ ಸಮೀಪದ ಹಣ್ಣೆ ಗ್ರಾಮದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ, ದಾದಿಯರ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯವನ್ನು ಕೋವಿಡ್ ನಿಂದ ರಕ್ಷಿಸಲು ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಮುಂದಿನ ಹತ್ತು ದಿನದ ಲಾಕ್‌ ಡೌನ್‌ ಸಮಯ ಮುಖ್ಯವಾದುದು. ಪ್ರತೀ ಮನೆ ಮೇಲೂ ನಿಗಾ ಇರಿಸಿ. ಯಾವುದೇ ಗ್ರಾಮಕ್ಕೆ ಅನ್ಯ ಜಿಲ್ಲೆ, ರಾಜ್ಯಗಳಿಂದ ಬಂದವರ ಮಾಹಿತಿ ನೀಡಿ. ಅವರನ್ನು ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡಲು ಸಹಕರಿಸಿ ಎಂದರು.

ನೀವು ಯಾವುದೇ ಪರೀಕ್ಷೆ ನಡೆಸಲ್ಲ. ಯಾವುದೇ ಚಿಕಿತ್ಸೆಯನ್ನೂ ನೀಡಲ್ಲ. ನಿಮಗೇಕೆ ಮಾಹಿತಿ ಕೊಡಬೇಕು? ಎಂದು ಕೆಲವರು ಉದ್ಧಟತನ ತೋರುತ್ತಾರೆ. ಪದೇ ಪದೇ ಮನೆಯ ಹತ್ತಿರ ಏಕೆ ಬರುತ್ತೀರಿ? ಎಂದು ಅತ್ತಿಮೊಗ್ಗೆಯಲ್ಲಿ ಹಲವರು ಗೇಲಿ ಮಾಡುತ್ತಾರೆ ಎಂದು ಆಶಾ ಕಾರ್ಯಕರ್ತೆಯರು ಅಳಲು
ತೋಡಿಕೊಂಡರು. ಹಳ್ಳಿಗಳ ಬಹುತೇಕ ಯುವಕರು ಗುಂಪಾಗಿ ಇಸ್ಪೀಟ್‌ ಆಟದಲ್ಲಿ ನಿರತರಾಗುತಿದ್ದಾರೆ. ಪೊಲೀಸರ ಭಯಕ್ಕಾಗಿ ಆಟದ ಜಾಗ ಬದಲಾಯಿಸುತ್ತಾರೆ. ಪೊಲೀಸರು ಇಂತಹವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು. ಪಡಿತರ ಚೀಟಿ ಹೊಂದಿಲ್ಲದ ಕುಟುಂಬ‌ಗಳಿಗೆ ಪಡಿತರ ನೀಡುವಂತೆ ಮನವಿ ಮಾಡಿದರು.

ತಾಪಂ ಸದಸ್ಯೆ ಪ್ರತಿಮಾ ಸೋಮಶೇಖರ್‌, ಇಒ ರಾಮ್‌ ಕುಮಾರ್‌, ಪಿಡಿಒ ರೇಖಾ ಮತ್ತಿತರರಿದ್ದರು. ಬುಕ್ಕಾಂಬು , ಜಾವೂರು, ಚಿಕ್ಕಾನವಂಗಲ, ಅತ್ತಿಮೊಗ್ಗೆ ಪಂಚಾಯತ್‌ ವ್ಯಾಪ್ತಿಯಲ್ಲಿ ಸಭೆ ನಡೆಸಿದ ಶಾಸಕರು ಕಾರ್ಯಕರ್ತೆಯರಿಂದ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next