Advertisement

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

04:37 PM Apr 25, 2024 | Team Udayavani |

ಚೆನ್ನೈ: ಅಜಿತ್‌ ಕುಮಾರ್‌  ಸಿನಿ ಕೆರಿಯರ್‌ನ ಸೂಪರ್‌ ಹಿಟ್‌ ಸಿನಿಮಾ ‘ಬಿಲ್ಲಾʼ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ಅಬ್ಬರಿಸಲಿದೆ.

Advertisement

ಇತ್ತೀಚಿನ ದಿನಗಳಲ್ಲಿ ಸೂಪರ್‌ ಹಿಟ್‌ ಸಿನಿಮಾಗಳು ನಾಯಕ – ನಾಯಕಿ ಅಥವಾ ವಿಶೇಷ ದಿನದಂದು ರೀ- ರಿಲೀಸ್‌ ಆಗುವ ಟ್ರೆಂಡ್‌ ಸೌತ್‌ ಸಿನಿಮಾರಂಗದಲ್ಲಿ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ʼಪ್ರೇಮಂʼ ದಳಪತಿ ವಿಜಯ್‌ ಅವರ ʼಗಿಲ್ಲಿʼ ಸಿನಿಮಾಗಳು ಸೇರಿವೆ.

ಇದೀಗ ಅಜಿತ್‌ ಕುಮಾರ್‌ ಅವರ ಸೂಪರ್‌ ಹಿಟ್‌ ʼಬಿಲ್ಲಾʼ ಕೂಡ ರೀ ರಿಲೀಸ್‌ ಆಗಲು ಸಿದ್ದವಾಗಿದೆ. ಮೇ.1 ರಂದು ಅಜಿತ್‌ ಕುಮಾರ್‌ ಅವರ 52ನೇ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ʼಬಿಲ್ಲಾʼ ಮರು ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಲಿದ್ದಾರೆ.

ಈ ಹಿಂದೆ ಕೂಡ ಅಭಿಮಾನಿಗಳ ಒತ್ತಾಯದ ಮೇರೆಗೆ ʼಬಿಲ್ಲಾʼ ಮರು ಬಿಡುಗಡೆ ಆಗಿದೆ. ಜಿಬಿ ಎಂಟರ್‌ಟೈನ್‌ಮೆಂಟ್‌ನ ಅರವಿಂದ್ ಸುರೇಶ್ ಕುಮಾರ್ ಮತ್ತು ಜ್ಞಾನ ಭಾರತಿ ಮೇ 1 ರಂದು ತಮಿಳುನಾಡಿನಾದ್ಯಂತ 150 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ವಿಷ್ಣುವರ್ಧನ್ ನಿರ್ದೇಶನದ ‘ಬಿಲ್ಲಾ’ ಆಕ್ಷನ್ ಥ್ರಿಲ್ಲರ್ ಆಗಿದ್ದು, ಅಮಿತಾಬ್ ಬಚ್ಚನ್ ಅವರ ‘ಡಾನ್’ ಚಿತ್ರದ ರಿಮೇಕ್ ಆಗಿದೆ. ಇದನ್ನು 1980 ರಲ್ಲಿ ರಜಿನಿಕಾಂತ್ ‘ಬಿಲ್ಲಾ’ ಎನ್ನುವ ಟೈಟಲ್‌ ನಲ್ಲಿ ರಿಲೀಸ್‌ ಮಾಡಲಾಗಿತ್ತು. 2007 ರಲ್ಲಿ ಅಜಿತ್‌ ಕುಮಾರ್‌ ಅದೇ ಟೈಟಲ್‌ ನಲ್ಲಿ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಅಜಿತ್‌ ಎರಡು ಶೇಡ್‌ ನಲ್ಲಿ ಕಾಣಿಸಿಕೊಂಡಿದ್ದರು.

Advertisement

ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಮಾಯಿ ಮಾಡುವುದರ ಜೊತೆಗೆ ಅಜಿತ್‌ ಸಿನಿ ಕೆರಿಯರ್‌ ನಲ್ಲಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು.

ನಯನತಾರಾ, ಪ್ರಭು, ರೆಹಮಾನ್, ನಮಿತಾ, ಸಂತಾನಂ, ಯೋಗ್ ಜಪೀ ಮತ್ತು ಆದಿತ್ಯ ಮೆನನ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next