Advertisement

Ajit Pawar ಮಹಾರಾಷ್ಟ್ರ ಸಿಎಂ? ಶಿವಸೇನಾ ಶಿಂಧೆ ಬಣಕ್ಕೆ ಕಾಡಿದೆ ಚಿಂತೆ

12:20 AM Jul 26, 2023 | Team Udayavani |

ಮುಂಬಯಿ: ಜು.2ರಂದು ಅಜಿತ್‌ ಪವಾರ್‌ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಗೆ ಶಿವಸೇನೆ ರೀತಿ ಎನ್‌ಸಿಪಿಯೂ ಒಡೆದುಹೋಗಿತ್ತು. ಆಗ ಅಜಿತ್‌ ಪವಾರ್‌ ಮತ್ತು ಎನ್‌ಸಿಪಿ ಅಗ್ರ ನಾಯಕ ಶರದ್‌ ಪವಾರ್‌ ನಡುವೆ ಭಾರೀ ಬಿರುಕುಂಟಾಗಿತ್ತು. ಹೊಸ ಸುದ್ದಿ ಏನು ಗೊತ್ತಾ? ಈ ಎರಡೂ ಬಣ ಗಳು ಒಂದಾಗಲು ಸಜ್ಜಾಗಿವೆಯಂತೆ. ಈ ಪ್ರಕಾರ ಅಜಿತ್‌ ಪವಾರ್‌ರನ್ನು ಕೂಡಲೇ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿಯಾಗಿ ಮಾಡಬೇಕೆನ್ನುವುದು ಶರದ್‌ ಪವಾರ್‌ ಬಯಕೆಯಂತೆ… ಹೀಗಂತ ಮೂಲಗಳು ವರದಿ ಮಾಡಿವೆ.

Advertisement

ಹೀಗಾದರೆ ಕಳೆದ ವರ್ಷವಷ್ಟೇ ಶಿವಸೇನೆಯನ್ನು ಒಡೆದುಕೊಂಡು ಹೋಗಿ ಮಹಾರಾಷ್ಟ್ರ ಮುಖ್ಯ ಮಂತ್ರಿ ಯಾಗಿರುವ ಏಕನಾಥ ಶಿಂಧೆಯ ಕಥೆ ಯೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆಯೇ ಶಿಂಧೆ ಪರ ನಿಂತು ಸರಕಾರವನ್ನು ಕೂಡಿಕೊಂಡಿರುವ 34 ಶಾಸಕರ ಗತಿಯೇನು ಎಂಬ ಪ್ರಶ್ನೆಗಳೂ ಶುರುವಾಗಿ ಮಹಾರಾಷ್ಟ್ರದಲ್ಲಿ ತಳಮಳ ಉಂಟಾಗಿದೆ. ಸದ್ಯ ಶಿಂಧೆ ಬಣದ ಶಾಸಕರ ವಿರುದ್ಧ ಅನರ್ಹತೆಯ ವಿಚಾರಣೆಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಅಜಿತ್‌ ಪವಾರ್‌ ಸಂಗತಿಯೇನು?: ಜು.17, 18ರಂದು ಬೆಂಗಳೂರಿನಲ್ಲಿ 26 ವಿಪಕ್ಷಗಳ ಸಭೆ ನಡೆದು ಅಲ್ಲಿ ಐಎನ್‌ಡಿಐಎ ಮೈತ್ರಿಕೂಟ ರಚನೆಯಾಗಿತ್ತು. ಆ ಸಭೆಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಜು.17ರಂದೇ ಆಗಮಿಸಬೇಕಾಗಿತ್ತು. ಆದರೆ ಅವರು ಜು. 18ಕ್ಕೆ ಮಾತ್ರ ಬಂದರು. ಇನ್ನೊಂದು ಕಡೆ ಸುಪ್ರಿಯಾ ಸುಳೆ ಬರಲೇ ಇಲ್ಲ. ಇವೆಲ್ಲ ಪೂರ್ವ ನಿಯೋಜಿತವಾಗಿ ನಡೆದಿರುವಂತಹ ಘಟನೆಗಳು ಎನ್ನಲಾಗಿದೆ. ಅಜಿತ್‌ ಮತ್ತು ಶರದ್‌ ಬಣಗಳನ್ನು ಒಂದಾಗಿಸಲು ಯತ್ನಸಾಗಿದೆ. ಶರದ್‌ಗೆ ವಯಸ್ಸಾ ಗಿರುವುದರಿಂದ ಅಜಿತ್‌ಗೆ ಸೆಡ್ಡು ಹೊಡೆಯಲು ಸಾಧ್ಯವಿಲ್ಲ. ಮತ್ತೂಂದು ಕಡೆ ಸುಪ್ರಿಯಾ ಸುಳೆ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಸಲೀಸಾಗಿ ಗೆಲ್ಲ ಬೇಕೆಂದರೆ ಅಜಿತ್‌ ಪವಾರ್‌ ಬೆಂಬಲ ಬೇಕೇಬೇಕು. ಪುತ್ರಿಯ ರಾಜಕೀಯ ಭವಿಷ್ಯ ಇಲ್ಲಿ ಮಹತ್ವದ್ದಾಗಿದೆ.

ಹಾಗೆಯೇ ಅಜಿತ್‌ ಪವಾರ್‌ಗೂ ಕಾನೂನು ಹೋರಾಟಗಳ ಗೋಜು ಬೇಡವಾಗಿದೆ. ಜತೆಗೆ ಶರದ್‌ ಪವಾರ್‌ ಜತೆಗೆ ನಿಂತರೆ ಮುಖ್ಯಮಂತ್ರಿ ಯಾಗುವ ಅವಕಾಶವೂ ಇದೆ. ಇದಕ್ಕೆ ಪ್ರತಿಯಾಗಿ ಜಯಂತ್‌ ಪಾಟೀಲ್‌ಗೆ ಸಂಪುಟದಲ್ಲಿ ಸ್ಥಾನ ನೀಡಬೇಕು. ಈ ಮಾರ್ಗದಲ್ಲಿ ಎನ್‌ಸಿಪಿಯನ್ನು ಒಂದು ಗೂಡಿಸುವ ಶರದ್‌ ಬೆಂಬಲಕ್ಕೆ ಬಿಜೆಪಿ ಏನು ಪ್ರತಿಕ್ರಿಯೆ ಕೊಡುತ್ತದೆ, ಶಿಂಧೆ ಬಣ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಜೋರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next