Advertisement

ಮಿಷನ್‌ ಶಕ್ತಿ ಶಿಷ್ಟಾಚಾರ ಹೊಣೆ ಅಜಿತ್‌ ದೋವಲ್‌ ಹೆಗಲಿಗೆ

01:14 AM Mar 30, 2019 | Team Udayavani |

ಹೊಸದಿಲ್ಲಿ: ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು (ಮಿಷನ್‌ ಶಕ್ತಿ) ಅಳವಡಿಸಿ ಕೊಂಡ ನಂತರ, ಆ ತಂತ್ರಜ್ಞಾನದ ಮೇಲೆ ತನ್ನದೇ ಆದ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ಹೊಂದುವ ನಿಟ್ಟಿನಲ್ಲಿ ಪ್ರತ್ಯೇಕ ಶಿಷ್ಟಾಚಾರಗಳನ್ನು ರೂಪಿಸಲು ಭಾರತ ಮುಂದಾಗಿದೆ. ಇಂಥ ಶಿಷ್ಟಾಚಾರಗಳ ಅವಶ್ಯಕತೆ ಮನಗಂಡಿರುವ ಪ್ರಧಾನಿ ಮೋದಿ, ಈ ಮಹತ್ವದ ಜವಾಬ್ದಾರಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೆ ವಹಿಸಿದ್ದಾರೆ. ಶುಕ್ರವಾರ, ಡಿಆರ್‌ಡಿಒ ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮೋದಿ, ಮಿಷನ್‌ ಶಕ್ತಿಗಾಗಿ ಹೊಸ ಶಿಷ್ಟಾಚಾರಗಳನ್ನು ರೂಪಿಸಬೇಕು ಹಾಗೂ ಈ ಶಿಷ್ಟಾಚಾರಗಳು ಭಾರತವೇ ಸ್ಥಾಪಿಸಿರುವ ಪರಮಾಣು ನಿರ್ವಹಣಾ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿರಬೇಕೆಂದು ಆಶಿಸಿದರೆಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next