Advertisement

ನನ್ನ ಏಕದಿನ ಪಂದ್ಯಗಳ ದಾಖಲೆಗಳು ಚೆನ್ನಾಗಿದೆ: ಮತ್ತೆ ತಂಡ ಪ್ರವೇಶಿಸುವ ಇಂಗಿತ ತೋರಿದ ಭಾರತೀಯ

05:03 PM Aug 02, 2020 | keerthan |

ಮುಂಬೈ: ಟೀಂ ಇಂಡಿಯಾದಲ್ಲಿ ಮೂರು ಮಾದರಿಯಲ್ಲಿ ಮಿಂಚುತ್ತಿರುವುದು ಕೆಲವು ಬ್ಯಾಟ್ಸಮನ್ ಗಳು ಮಾತ್ರ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರು ಮೂರು ಮಾದರಿಯಲ್ಲಿ ಆಡುತ್ತಾರೆ. ಆದರೆ ಕೆಲವು ಒಂದು ಮಾದರಿಗೆ ಮಾತ್ರ ಸೀಮಿತರಾಗಿದ್ದಾರೆ. ಅಂತವರಲ್ಲಿ ಓರ್ವ ಮುಂಬೈ ಮೂಲದ ಆಟಗಾರ ಅಜಿಂಕ್ಯ ರಹಾನೆ.

Advertisement

ಮೊದಲು ಏಕದಿನ ಮತ್ತು ಟಿ20 ತಂಡದ ಸದಸ್ಯನಾಗಿದ್ದ ಅಜಿಂಕ್ಯ ರಹಾನೆ ಸದ್ಯ ಟೆಸ್ಟ್ ತಂಡದಲ್ಲಿ ಮಾತ್ರ ಇದ್ದಾರೆ. ಟೆಸ್ಟ್ ತಂಡದ ಉಪನಾಯಕ ಆಗಿರುವ ಅಜಿಂಕ್ಯ ಮತ್ತೆ ಏಕದಿನ ತಂಡ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಪರ 90 ಏಕದಿನ ಪಂದ್ಯವಾಡಿರುವ ಅಜಿಂಕ್ಯ 2962 ರನ್ ಗಳಿಸಿದ್ದಾರೆ. ಆರಂಭಿಕನಾಗಿ 54 ಪಂದ್ಯಗಳಲ್ಲಿ 1937 ರನ್ ಗಳಿಸಿದ್ದು, ನಾಲ್ಕನೇ ಕ್ರಮಾಂಕದಲ್ಲಿ 27 ಪಂದ್ಯದಲ್ಲಿ 843 ರನ್ ಗಳಿಸಿದ್ದಾರೆ.

ಇಂಡಿಯಾ ಟುಡೆ ಜೊತೆ ಮಾತನಾಡಿರುವ ಅಜಿಂಕ್ಯ ರಹಾನೆ, ಏಕದಿನ ತಂಡಕ್ಕೆ ಮರಳಿ ಬರುವುದೇ ನನ್ನ ಮೊದಲ ಗುರಿ. ನಾನು ಯಾವತ್ತೂ ದಾಖಲೆಗಳನ್ನು ನೋಡುವುದಿಲ್ಲ. ಆದರೆ ನನ್ನ ಏಕದಿನ ಸಾಧನೆಗಳನ್ನು ಗಮನಿಸುವುದಾದರೆ ತಂಡದಿಂದ ಹೊರಬೀಳುವ ಮೊದಲ ಮೂರು- ನಾಲ್ಕು ವರ್ಷಗಳ ಏಕದಿನ ಬ್ಯಾಟಿಂಗ್ ಉತ್ತಮವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next