ಬೆಂಗಳೂರು: ಭಾರತದ ವಿಶ್ವಕಪ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಇರಬೇಕಿತ್ತು ಎಂಬುದಾಗಿ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕ ಹೆಚ್ಚು ಗಟ್ಟಿಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಕಿರ್ಮಾನಿ, ‘ವಿಜಯ್ ಶಂಕರ್ ಬದಲು ಕೇದಾರ್ ಜಾಧವ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ. ಅಕಸ್ಮಾತ್ ಗಾಯಾಳು ಜಾಧವ್ ಲಭ್ಯರಾಗದೇ ಹೋದಲ್ಲಿ ಈ ಅವಕಾಶವನ್ನು ಅಂಬಾಟಿ ರಾಯುಡು ಅವರಿಗೆ ನೀಡಬೇಕು.
ಅಜಿಂಕ್ಯ ರಹಾನೆ ಕೂಡ ಸೂಕ್ತ ಆಯ್ಕೆಯಾಗಲಿದೆ’ ಎಂದರು.’ಭಾರತ ತಂಡದ ಮೇಲೆ ನನಗೆ ನಂಬಿಕೆ ಇದೆ. ವಿಶ್ವಕಪ್‌ಗ್ೂ ಮುನ್ನ ಉಳಿದ ತಂಡಗಳೆಲ್ಲ ಸಾಕಷ್ಟು ಏಕದಿನ ಪಂದ್ಯಗಳನ್ನಾಡಿ ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಭಾರತವೇ ಹಿಂದಿದೆ. ಇದರಿಂದ ಕೊಹ್ಲಿ ಪಡೆಗೇನೂ ಅಡ್ಡಿಯಾಗದು’ ಎಂದರು.
Advertisement