Advertisement

ಅಫ್ಘಾನ್‌ ಟೆಸ್ಟ್‌: ಕೊಹ್ಲಿ ಬದಲಿಗೆ ನಾಯರ್‌

06:00 AM May 09, 2018 | |

ಬೆಂಗಳೂರು: ವಿರಾಟ್‌ ಕೊಹ್ಲಿ ಕೌಂಟಿಯಲ್ಲಿ ಆಡುವ ಕಾರಣ ಕರ್ನಾಟಕದ ಕರುಣ್‌ ನಾಯರ್‌ ಅವರು ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೆ 15 ಸದಸ್ಯರ ಬಲಿಷ್ಠ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡದಿಂದ ಹಿರಿಯ ಆಟಗಾರ ರೋಹಿತ್‌ ಶರ್ಮ ಅವರನ್ನು ಕೈಬಿಡಲಾಗಿದೆ. 

Advertisement

ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆಯ್ಕೆ ಸಮಿತಿಯ ಸಭೆಯಲ್ಲಿ ದೀರ್ಘ‌ ಚರ್ಚೆ ನಡೆಸಿದ ಬಳಿಕ ಎಂಎಸ್‌ಕೆ ಪ್ರಸಾದ್‌ ತಂಡವನ್ನು ಪ್ರಕಟಿಸಿದರು. ಇದೇ ವೇಳೆ ಅಯರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಸರಣಿಗೂ ತಂಡಗಳನ್ನು ಪ್ರಕಟಿಸಲಾಗಿದೆ. 

ಅಜಿಂಕ್ಯ ರಹಾನೆ ಅವರನ್ನು ಏಕ ದಿನ ಸರಣಿಯಿಂದ ಕೈಬಿಡಲಾಗಿದೆ. ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ 50 ಓವರ್‌ಗಳ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ರಾಯುಡು, ರಾಹುಲ್‌ ಪ್ರಮುಖರು ಅಂಬಾಟಿ ರಾಯುಡು ಮತು ಕೆಎಲ್‌ ರಾಹುಲ್‌ ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತೀಯ ತಂಡಕ್ಕೆ ಮರಳಿದವರಲ್ಲಿ ಪ್ರಮುಖರಾಗಿದ್ದಾರೆ. ಐಪಿಎಲ್‌ನಲ್ಲಿ ಸ್ಥಿರ ನಿರ್ವಹಣೆ ನೀಡುತ್ತಿರುವ ಯುವ ವೇಗಿ ಸಿದ್ಧಾರ್ಥ್ ಕೌಲ್‌ ಅವರನ್ನು ಅಯರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ. ಸೆಹವಾಗ್‌ ಬಳಿಕ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಆಟಗಾರ ಎಂದೆನಿಸಿಕೊಂಡರುವ ಕರುಣ್‌ ನಾಯರ್‌ ಅವರ ಆಗಮನ ಆಯ್ಕೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅವರು 14 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಜೂನ್‌ 14ರಿಂದ ನಡೆಯುವ ಅಫ್ಘಾನ್‌ ವಿರುದ್ಧದ ಏಕೈಕ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆಯಿದೆ.

ಕೊಹ್ಲಿ ನಾಯಕ
ಅಯರ್‌ಲ್ಯಾಂಡ್‌ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಕೊಹ್ಲಿ ಅವರನ್ನು ನಾಯಕರನ್ನಾಗಿ ಹೆಸ ರಿಸಲಾಗಿದೆ. ಕೊಹ್ಲಿ ಜೂನ್‌ ತಿಂಗಳು ಪೂರ್ತಿ ತಮ್ಮ ಕೌಂಟಿ ಪರ ಆಡಲಿದ್ದಾರೆ ಎಂದು ಸರ್ರೆ ಅಧಿಕೃತವಾಗಿ ಪ್ರಕಟಿಸಿದೆ. ಅಯರ್‌ಲ್ಯಾಂಡ್‌ ವಿರುದ್ಧದ 2 ಪಂದ್ಯಗಳು ಅನುಕ್ರಮವಾಗಿ ಜೂನ್‌ 27 ಮತ್ತು 29ರಂದು ನಡೆಯಲಿದೆ. ಯಾರ್ಕ್‌ ಶೈರ್‌ ವಿರುದ್ಧದ ಸರ್ರೆಯ ಕೌಂಟಿ  ಪಂದ್ಯ ಜೂನ್‌ 25ರಿಂದ 28ರ ವರೆಗೆ ನಡೆಯಲಿದೆ.

ಕೊಹ್ಲಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಟೆಸ್ಟ್‌ ಪರಿಣತರು ಅಫ್ಘಾನ್‌ ವಿರುದ್ಧದ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಕೊಹ್ಲಿ ಒಂದು ಪ್ರಮುಖ ಉದ್ದೇಶಕ್ಕಾಗಿ ಹೋಗುತ್ತಿದ್ದಾರೆ ಮತ್ತು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗಾಗಿ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಿ ದ್ದಾರೆ. ಅವರು ಅಲ್ಲಿಗೆ ಹೋಗಿ ಉತ್ತಮ ನಿರ್ವಹಣೆ ನೀಡುವುದು ಒಳ್ಳೆಯದು. ಈ ಮೂಲಕ ಸರಣಿ ಗೆಲ್ಲಲು ನಮಗೆ ಒಳ್ಳೆಯ ಅವಕಾಶ ಲಭಿಸಲಿದೆ ಎಂದು ಆಯ್ಕೆ ಸಮಿತಿಯ ಚೇರ್ಮನ್‌ ಪ್ರಸಾದ್‌ ತಿಳಿಸಿದರು.

Advertisement

ಅಫ್ಘಾನ್‌ ಟೆಸ್ಟ್‌ಗೆ ಭಾರತ ತಂಡ
ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್‌, ಕೆಎಲ್‌ ರಾಹುಲ್‌, ಚೇತೇಶ್ವರ ಪೂಜಾರ, ಕರುಣ್‌ ನಾಯರ್‌, ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಹಾರ್ದಿಕ್‌ ಪಾಂಡ್ಯ, ಇಶಾಂತ್‌ ಶರ್ಮ, ಶಾದೂìಲ್‌ ಠಾಕುರ್‌.

ಅಯರ್‌ಲ್ಯಾಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ವಿರಾಟ್‌ ಕೊಹ್ಲಿ  (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ಎಂಎಸ್‌ ಧೋನಿ, ದಿನೇಶ್‌ ಕಾರ್ತಿಕ್‌, ಯುಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಸಿದ್ಧಾರ್ಥ್ ಕೌಲ್‌, ಉಮೇಶ್‌ ಯಾದವ್‌

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ವಿರಾಟ್‌ ಕೊಹ್ಲಿ  (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ಎಂಎಸ್‌ ಧೋನಿ, ದಿನೇಶ್‌ ಕಾರ್ತಿಕ್‌, ಯುಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಸಿದ್ಧಾರ್ಥ್ ಕೌಲ್‌, ಉಮೇಶ್‌ ಯಾದವ್‌

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ವಿರಾಟ್‌ ಕೊಹ್ಲಿ  (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಅಂಬಾಟಿ ರಾಯುಡು ಎಂಎಸ್‌ ಧೋನಿ, ದಿನೇಶ್‌ ಕಾರ್ತಿಕ್‌, ಯುಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಸಿದ್ಧಾರ್ಥ್ ಕೌಲ್‌, ಉಮೇಶ್‌ ಯಾದವ್‌.
 

Advertisement

Udayavani is now on Telegram. Click here to join our channel and stay updated with the latest news.

Next