ಕೋಲ್ಕತ್ತಾ: ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಸದ್ಯ ಅದ್ಭುತ ಟಿ20 ಫಾರ್ಮ್ ನಲ್ಲಿದ್ದಾರೆ. ಪ್ರತಿ ಪಂದ್ಯದಲ್ಲೂ ಅಬ್ಬರಿಸುತ್ತಿರುವ ರಹಾನೆ ರವಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 29 ಎಸೆತದಲ್ಲಿ 71 ರನ್ ಚಚ್ಚಿದರು.
ಅಜಿಂಕ್ಯ ರಹಾನೆ ಅವರು ಈ ಅಜೇಯ ಇನ್ನಿಂಗ್ಸ್ ನಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್ ಹೊಡೆದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದ ಬಳಿಕ ಮಾತನಾಡಿದ ಅವರು, ಆಡುವ ಸಮಯದಲ್ಲಿ ಸ್ಪಷ್ಟ ಮನಸ್ಥಿತಿಯನ್ನು ಹೊಂದಿದ್ದೆ. ನಿಮ್ಮ ಕಿವಿಗಳ ನಡುವಿನ ವಿಷಯ ಸರಿಯಾಗಿದ್ದರೆ ಮತ್ತು ನಿಮ್ಮ ಮನಸ್ಸು ಸರಿಯಾಗಿದ್ದರೆ ನೀವು ಚೆನ್ನಾಗಿರುತ್ತೀರಿ. ನಾನು ನನ್ನ ಆಟವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ. ವಿಕೆಟ್ ಸ್ವಲ್ಪ ಜಿಗುಟಾಗಿತ್ತು, ನಾವು ಉತ್ತಮ ಆರಂಭವನ್ನು ಹೊಂದಿದ್ದೆವು, ಹೀಗಾಗಿ ನಂತರ ನಾನು ನನ್ನ ಹೊಡೆತಗಳನ್ನು ಆಡಲು ಮತ್ತು ಆವೇಗವನ್ನು ಉಳಿಸಿಕೊಂಡು ಆಡಿದೆ. ನಾನು ಇಲ್ಲಿಯವರೆಗೆ ನನ್ನ ಎಲ್ಲಾ ಇನ್ನಿಂಗ್ ಗಳನ್ನು ಆನಂದಿಸಿದ್ದೇನೆ, ಆದರೆ ಉತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ನಾನು ಭಾವಿಸುತ್ತೇನೆ. ನಾನು ಹಲವು ವರ್ಷಗಳಿಂದ ಭಾರತಕ್ಕಾಗಿ ಮಹಿ ಭಾಯ್ (ಧೋನಿ) ಅಡಿಯಲ್ಲಿ ಆಡಿದ್ದೇನೆ ಮತ್ತು ಈಗ ಸಿಎಸ್ ಕೆ ನಲ್ಲಿಯೂ ಸಹ ಕಲಿಯುತ್ತಿದ್ದೇನೆ. ಅವರು ಹೇಳುವುದನ್ನು ನೀವು ಕೇಳಿದರೆ, ನೀವು ಪ್ರದರ್ಶನ ನೀಡದೆ ಇರಲಾಗುವುದಿಲ್ಲ” ಎಂದರು.
ಇದನ್ನೂ ಓದಿ:ಕೈ ಬಂಡಾಯ ಶಮನ; ಕಮಲ, ದಳಕ್ಕೆ ಬಿಸಿ ತುಪ್ಪ
ಈ ಬಾರಿ ಸಿಎಸ್ ಕೆ ಪರವಾಗಿ ಐದು ಪಂದ್ಯಗಳನ್ನು ಆಡಿರುವ ಅಜಿಂಕ್ಯ ರಹಾನೆ, 52.25ರ ಸರಾಸರಿಯಲ್ಲಿ 209 ರನ್ ಗಳಿಸಿದ್ದಾರೆ. ಗಮನಾರ್ಹವಾಗಿ ಅಜಿಂಕ್ಯ ರಹಾನೆ ಈ ಬಾರಿ 199.04ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.