Advertisement

ಕೋವಿಡ್ -19 ಮುಗಿದ ಕೂಡಲೇ ಐಪಿಎಲ್ ಆಡಲು ಸಾಧ್ಯವಿಲ್ಲ: ಅಜಿಂಕ್ಯ ರಹಾನೆ

05:10 PM May 06, 2020 | keerthan |

ಮುಂಬೈ: ಸದಾ ಕ್ರಿಕೆಟ್ ನಿಂದ ಬ್ಯುಸಿ ಇರುತ್ತಿದ್ದ ಭಾರತೀಯ ಕ್ರಿಕೆಟಿಗರು ಈಗ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೋವಿಡ್-19 ಕಾರಣದಿಂದ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದೆ. ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಕೂಡಾ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದು, ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Advertisement

ಎಲ್ಸಾ ಆ್ಪಪ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಹಾನೆ, ಕೋವಿಡ್-19 ಹತೋಟಿಗೆ ಬಂದ ನಂತರ ಕನಿಷ್ಟ ಒಂದು ತಿಂಗಳ ಅಭ್ಯಾಸ ನಡೆಸಬೇಕಾಗಬಹುದು ಎಂದು ಹೇಳಿದ್ದಾರೆ.

ಕೋವಿಡ್-19 ನಂತರದ ದಿನಗಳಲ್ಲಿ ಕ್ರಿಕೆಟಿಗರ ಜೀವನಶೈಲಿ ಬದಲಾಗಬಹುದು ಎಂದು ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಂದ ನಂತರ ನಮಗೆ ಎರಡು ಮೂರು ವಾರಗಳ ಅಭ್ಯಾಸ ಖಂಡಿತ ಬೇಕಾಗಿದೆ. ಇಷ್ಟು ದಿನಗಳ ಕಾಲ ಅಭ್ಯಾಸ ನಡೆಸದೆ ಯಾವುದೇ ದೇಶೀಯ ಕ್ರಿಕೆಟ್ ಆಡಲೂ ಸಾಧ್ಯವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next