Advertisement

ರಣಜಿ ಪಂದ್ಯ: ರಹಾನೆ ದ್ವಿಶತಕ ; ಮುಂಬಯಿ ಬೃಹತ್‌ ಮೊತ್ತ

11:32 PM Dec 21, 2022 | Team Udayavani |

ಮುಂಬಯಿ: ಹೈದರಾಬಾದ್‌ ಎದುರಿನ ರಣಜಿ ಪಂದ್ಯದಲ್ಲಿ ಮುಂಬಯಿ ಭರ್ಜರಿ ಮೇಲುಗೈ ಸಾಧಿಸಿದೆ. ನಾಯಕ ಅಜಿಂಕ್ಯ ರಹಾನೆ ಅವರ ದ್ವಿಶತಕ, ಯಶಸ್ವಿ ಜೈಸ್ವಾಲ್‌ ಮತ್ತು ಸಫ‌ìರಾಜ್‌ ಖಾನ್‌ ಅವರ ಶತಕ ಸಾಹಸದಿಂದ 6ಕ್ಕೆ 651 ರನ್‌ ರಾಶಿ ಹಾಕಿದೆ.

Advertisement

ಜವಾಬು ನೀಡಲಾರಂಭಿಸಿದ ಹೈದರಾಬಾದ್‌ 6 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿದ್ದು, 478 ರನ್ನುಗಳ ಭಾರೀ ಹಿನ್ನಡೆಯಲ್ಲಿದೆ.

ಮುಂಬಯಿ ಸರದಿಯಲ್ಲಿ ಅಜಿಂಕ್ಯ ರಹಾನೆ 204 ರನ್‌ ಬಾರಿಸಿ ಮಿಂಚಿದರು (261 ಎಸೆತ, 26 ಬೌಂಡರಿ, 3 ಸಿಕ್ಸರ್‌). ಆರಂಭಕಾರ ಯಶಸ್ವಿ ಜೈಸ್ವಾಲ್‌ ಅವರದು 162 ರನ್‌ ಕೊಡುಗೆ (195 ಎಸೆತ, 27 ಬೌಂಡರಿ, 1 ಸಿಕ್ಸರ್‌). ಸಫ‌ìರಾಜ್‌ ಖಾನ್‌ ಅಜೇಯ 126 ರನ್‌ ಹೊಡೆದರು (126 ಎಸೆತ, 18 ಬೌಂಡರಿ). ಸೂರ್ಯಕುಮಾರ್‌ ಯಾದವ್‌ ಅವರಿಗೆ ಹತ್ತೇ ರನ್ನಿನಿಂದ ಶತಕ ಕೈತಪ್ಪಿತು.

ಹೈದರಾಬಾದ್‌ ಕುಸಿತದಲ್ಲಿ ಶಮ್ಸ್‌ ಮುಲಾನಿ ಪ್ರಮುಖ ಪಾತ್ರ ವಹಿಸಿದರು. ಉರುಳಿದ 6 ವಿಕೆಟ್‌ಗಳಲ್ಲಿ 5 ಮುಲಾನಿ ಪಾಲಾಯಿತು. 72 ರನ್‌ ಮಾಡಿರುವ ರೋಹಿತ್‌ ನಾಯುಡು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next