Advertisement

AJFAN ಡ್ರೈಫ್ರೋಟ್ಸ್‌ ರಿಟೇಲ್‌ ಮಳಿಗೆ ಇಂದು ಶುಭಾರಂಭ

09:55 AM Nov 24, 2023 | Team Udayavani |

ಉಡುಪಿ: ಅಂಬಾಗಿಲು ಪುತ್ತೂರಿನ ಅಮೃತ್‌ ಗಾರ್ಡನ್‌ ಮುಂಭಾಗದ ರಾ.ಹೆ.-66 ಸಮೀಪದ ಅಂಬಿಕಾ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ “ಅಜ್‌ಫನ್‌ ಡೇಟ್ಸ್‌ ಆ್ಯಂಡ್‌ ನಟ್ಸ್‌’ ಡ್ರೈಫ್ರೋಟ್ಸ್‌ ರಿಟೇಲ್‌ ಮಳಿಗೆಯ 172ನೇ ಶಾಖೆಯ ಉದ್ಘಾಟನೆ ನ. 24ರ ಮಧ್ಯಾಹ್ನ 3ಕ್ಕೆ ನಡೆಯಲಿದೆ.

Advertisement

ನಗರಸಭೆ ಸದಸ್ಯ ಡಿ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಲಿದ್ದಾರೆ. ಎಂಜಿನಿಯರ್‌ ಶ್ರೀನಾಗೇಶ್‌ ಹೆಗ್ಡೆ, ಪಾಲುದಾರರಾದ ಪಿ.ಬಿ. ಇಬ್ರಾಹಿಂ, ಡಾ| ಮಹಮ್ಮದ್‌ ಕುಟ್ಟಿ, ಕಟ್ಟಡ ಮಾಲಕ ಜಗದೀಶ್‌ ಉಪಸ್ಥಿತರಿರುವರು.

ನೈಸರ್ಗಿಕವಾದ ಉತ್ತಮ ಗುಣಮಟ್ಟದ ವಿವಿಧ ಡ್ರೈಫ್ರೋಟ್ಸ್‌ಗಳು, ಸೌದಿ ಅರೇಬಿಯಾದಲ್ಲಿ ತಮ್ಮ ಸ್ವಂತ ತೋಟದಲ್ಲಿ ಬೆಳೆಸಿದ ವಿವಿಧ ಬಗೆಯ ವಿಶೇಷ ಖರ್ಜೂರಗಳು, ವಿದೇಶಿ ಚಾಕಲೇಟ್‌ಗಳು, ತಂಪು ಪಾನೀಯಗಳು, ಪ್ರಕೃತಿ ಮಡಿಲಿನ ಜೇನುತುಪ್ಪ, ವಿವಿಧ ಬಗೆಯ ಸಾಂಬಾರ ಪದಾರ್ಥಗಳು ಇಲ್ಲಿ ದೊರೆಯುತ್ತವೆ. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಧ್ಯೇಯೋದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next