Advertisement

ಅಜೆಕಾರು ಕಲಾಭಿಮಾನಿ ಬಳಗ: ಭಿವಂಡಿಯಲ್ಲಿ ಯಕ್ಷಗಾನ 

03:35 PM Nov 01, 2018 | Team Udayavani |

ಭಿವಂಡಿ: ಕಲಾವಿದ, ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರ ಸಂಚಾಲಕತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ತವರೂರ ನಾಮಾಂಕಿತ ಕಲಾವಿದರಿಂದ ಅ. 25ರಂದು ರಾತ್ರಿ ಭಿವಂಡಿ ಪದ್ಮನಗರ ವರಾಳದೇವಿ ಮಾರ್ಗದಲ್ಲಿರುವ ಸ್ವಾಮಿ ಅಯ್ಯಪ್ಪ ಮಂದಿರದಲ್ಲಿ ನಾಗ ತಂಬಿಲ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

ಬಂಟರ ಸಂಘ ಮುಂಬಯಿ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಭಿವಂಡಿ ಅಯ್ಯಪ್ಪ ಮಂದಿರದ ಧರ್ಮದರ್ಶಿ ವಿಶ್ವನಾಥ್‌ ಆರ್‌. ಶೆಟ್ಟಿ ಮತ್ತು ಹೇಮಲತಾ ವಿ. ಶೆಟ್ಟಿ ದಂಪತಿ ಹಾಗೂ ಯಕ್ಷಗಾನ ಕಲಾಪೋಷಕ ಆನಂದ ಎಸ್‌. ಆಚಾರ್ಯ ಮತ್ತು ಸುಮಿತ್ರಾ ಆಚಾರ್ಯ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ವಿಶ್ವನಾಥ ಆರ್‌. ಶೆಟ್ಟಿ ಅವರು ಮಾತನಾಡಿ, ಅಜೆಕಾರು ಕಲಾಭಿಮಾನಿ ಬಳಗದ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಈ ಬಳಗ ನೀಡುತ್ತಿರುವ ಕೊಡುಗೆಯ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ನನ್ನ ಈ ರೀತಿಯ ಅಭಿಮಾನಕ್ಕೆ ಬಾಲಕೃಷ್ಣ ಶೆಟ್ಟಿ ಅವರು ಬಹಳಷ್ಟು ಪ್ರೀತಿಯಿಂದ ಈ ಸಮ್ಮಾನವನ್ನು ನೀಡಿದ್ದಾರೆ. ಅಯ್ಯಪ್ಪ ಸ್ವಾಮಿ ಪ್ರಸಾದರೂಪದಲ್ಲಿ ದಕ್ಕಿದ ಈ ಸಮ್ಮಾನವನ್ನು ಗೌರವಪೂರ್ಣವಾಗಿ ಸ್ವೀಕರಿಸಿದ್ದೇವೆ ಎಂದರು.

ಭಿವಂಡಿ ಹೊಟೇಲ್‌ ಮತ್ತು ಪರ್ಮಿಟ್‌ ಓನರ್ ಅಸೋಸಿಯೇಶನ್‌ ಇದರ ಅಧ್ಯಕ್ಷ ಭಾಸ್ಕರ್‌ ಟಿ. ಶೆಟ್ಟಿ ಅವರು ಮಾತನಾಡಿ, ಇಂದು ನಡೆದ ಈ ಸಮ್ಮಾನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಧರ್ಮದರ್ಶಿ ವಿಶ್ವನಾಥ್‌ ಆರ್‌. ಶೆಟ್ಟಿ ಅವರ ಕೊಡುಗೆ ಈ ಸನ್ನಿಧಾನದಲ್ಲಿ ಬಹಳಷ್ಟಿದೆ. ಅದೇ ರೀತಿಯಲ್ಲಿ ಆನಂದ ಎಸ್‌. ಆಚಾರ್ಯರು ಓರ್ವ ಕಲಾಪೋಷಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದವರಿದ್ದಾರೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ ಅವರು ಮಾತನಾಡಿ, ಭಿವಂಡಿ ಪರಿಸರದಲ್ಲಿ ನಗರ ಸೇವಕ ಸಂತೋಷ್‌ ಎಂ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಅವರ ಸಂಪೂರ್ಣ ಸಹಕಾರದಲ್ಲಿ ಅನೇಕ ಸಮಾಜಪರ ಕಾರ್ಯಗಳು ನಡೆಯುತ್ತಿವೆೆ. ಅದರಲ್ಲೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರ ಪ್ರೋತ್ಸಾಹ ನಿಜವಾಗಿಯೂ ಮೆಚ್ಚುವಂಥದ್ದು. ಇವರಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯುತ್ತಿರಲಿ. ಕಲೆ-ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ ಕಲಾಪೋಷಕರನ್ನು ಗುರುತಿಸಿ, ಗೌರವಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ನುಡಿದರು.

Advertisement

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಿವಂಡಿ-ನಿಜಾಂಪುರ ನಗರ ಪಾಲಿಕೆಯ ನಗರ ಸೇವಕ ಸಂತೋಷ್‌ ಎಂ. ಶೆಟ್ಟಿ, ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ರವೀಂದ್ರ ವೈ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಜಿ. ಪೂಜಾರಿ, ಕನ್ನಡ ಸಂಘ ಮೋಹನೆ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ನಿತ್ಯಾನಂದ ಸೇವಾ ಮಂಡಳಿ ಭಿವಂಡಿ ಉಪಾಧ್ಯಕ್ಷ ವಾಸು ಕೆ. ಶೆಟ್ಟಿ, ಉದ್ಯಮಿ ಸುಧೀರ್‌ ಜೆ. ಶೆಟ್ಟಿ ವಂಡ್ಸೆ, ಬಂಟರ ಸಂಘ ಮುಂಬಯಿ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ರಾಮಕೃಷ್ಣ ಎನ್‌. ಶೆಟ್ಟಿ, ಕಲ್ಯಾಣ್‌ ಸಾಯಿ ಮಹಾದೇವ್‌ ಹೊಟೇಲ್‌ನ ಯೋಗೇಶ್‌ ಶೆಟ್ಟಿ, ಉದ್ಯಮಿ ಹರೀಶ್‌ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಬಾಲಕೃಷ್ಣ ಶೆಟ್ಟಿ ಅಜೆಕಾರು ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಿದರು.

ಅತಿಥಿ-ಗಣ್ಯರನ್ನು ಬಳಗದ ವತಿಯಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಭಿನಂದಿಸಿ ಗೌರವಿಸಿದರು. ಅಜೆಕಾರು ಕಲಾಭಿಮಾನಿ ಬಳಗದ ಊರಿನ ಕಲಾವಿದ ದಿನೇಶ್‌ ಶೆಟ್ಟಿ ಕಾವಳ್‌ಕಟ್ಟೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next