Advertisement

ಅಜೆಕಾರು ಕಲಾಭಿಮಾನಿ ಬಳಗ:ವಾರ್ಷಿಕೋತ್ಸವ,ಯಕ್ಷರಕ್ಷಾ ಪ್ರಶಸ್ತಿ ಪ್ರದಾನ

04:26 PM Aug 30, 2018 | |

ಮುಂಬಯಿ: ಕಳೆದ ಒಂದೂವರೆ ದಶಮಾನಗಳಿಗಿಂತಲೂ ಅಧಿಕ ಕಾಲ ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉತ್ತುಂಗಕ್ಕೇರಿಸುವಲ್ಲಿ ಅಜೆಕಾರು ಕಲಾಭಿ ಮಾನಿ ಬಳಗದ ಪಾತ್ರ ಮಹತ್ತ ರವಾಗಿದೆ. ಊರಿನ ಕಲಾವಿದರಿಗೆ ಮುಂಬಯಿಯಲ್ಲಿ ವೇದಿಕೆಯನ್ನು ಕಲ್ಪಿಸಿ ಯಶಸ್ವಿಯಾಗಿ ಕಾರ್ಯಕ್ರ ಮಗಳನ್ನು ಆಯೋಜಿ ಸುವುದಲ್ಲದೆ, ಅರ್ಹ ಕಲಾವಿ ದರಿಗೆ ಗೌರವಾ ರ್ಪಣೆ, ಆರ್ಥಿಕ ನಿಧಿ ಅರ್ಪ ಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಲಾಸೇವೆ ಇತರರಿಗೆ ಮಾದರಿಯಾಗಿದೆ. ಮುಂಬಯಿಯ ಶ್ರೇಷ್ಠ ಯಕ್ಷಗುರುವಾಗಿವ ಅವರು ಇಲ್ಲಿನ ಹೆಚ್ಚಿನ  ಸಂಘಗಳ ಹಿರಿಯರು, ಕಿರಿಯರಿಗೆ ಗೆಜ್ಜೆ ಕಟ್ಟಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅವರು ಮಾಡುತ್ತಿರುವ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬರಲಿ ಎಂದು ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ ಅವರು ನುಡಿದರು.

Advertisement

ಆ. 26 ರಂದು ಕುರ್ಲಾ ಪೂರ್ವದ ಬಂಟ ರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ, ದಿ| ಸುಧಾಕರ ಶೆಟ್ಟಿ ಎಣ್ಣೆಹೊಳೆ ಸ್ಮೃತಿ ವೇದಿಕೆಯಲ್ಲಿ ನಡೆದ ಅಜೆ ಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಪ್ತದಶ ವಾರ್ಷಿಕೋತ್ಸವ, ಸರಣಿ ಯಕ್ಷಗಾನ ತಾಳಮದ್ದಳೆಯ ಸಮಾ ರೋಪ, ವಾರ್ಷಿಕ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಕಲೆ-ಕಲಾವಿದರನ್ನು ಗೌರವಿಸುವ ವಿಶಾಲ ಹೃದಯವಂತಿಕೆ ನಮ್ಮದಾಗಬೇಕು. ಬಾಲಕೃಷ್ಣ ಶೆಟ್ಟಿ ಅವರು ಬೃಹತ್‌ ನಿಧಿಯೊಂದಿಗೆ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅಭಿಂದನೀಯ. ಬಾಲಣ್ಣನವರು ಕಲಾಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲಿ. ಅವರಿಂದ ಕಲಾಸೇವೆ ನಿರಂತರ ವಾಗಿ ನಡೆಯುತ್ತಿರಲಿ. ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಅವರಿಗೆ ಸದಾಯಿದೆ ಎಂದರು.

ವಸಾಯಿ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಶಂಕರ್‌ ಆಳ್ವ ಕರ್ನೂರು ಅವರು ಮಾತನಾಡಿ, ಶ್ರೀಮಂತ ಕಲೆಯಾಗಿರುವ ಯಕ್ಷ ಗಾನವು ಇಂದು ವಿಶ್ವಗಾನವಾಗಿ ಬೆಳೆಯಲು ಅಜೆಕಾರು ಬಾಲಕೃಷ್ಣ ಶೆಟ್ಟಿಯವರಂತವರು ಕಾರಣ. ಅವರ ಕಲಾಸೇವೆಗೆ ನಾವು ಬೆನ್ನೆಲುಬಾಗಿ ನಿಲ್ಲಬೇಕು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಎಲ್ಲಾ ಕಡೆಗಳಲ್ಲಿ ಉಚಿತವಾಗಿ ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳು ನಡೆಯು ತ್ತಿರುವುದು ಅಭಿನಂದನೀಯ ಎಂದು ನುಡಿದರು.
ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇ ಲಿಯರ್ ಅಸೋಸಿಯೇಶನ್‌ ಇದರ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಅವರು ಮಾತನಾಡಿ, ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಮುಂಬಯಿ ಮಹಾನ ಗರದಾದ್ಯಂತ ಪಸರಿಸಿದ ಕೀರ್ತಿ ಅಜೆಕಾರು ಕಲಾಭಿಮಾನಿ ಬಳಗಕ್ಕೆ ಸಲ್ಲುತ್ತದೆ. ಯುವ ಜನಾಂಗವನ್ನು ಯಕ್ಷಗಾನದತ್ತ ಒಲವು ಮೂಡಿಸುವಂತೆ ಬಾಲಕೃಷ್ಣ ಶೆಟಿ ಅವರು ಮಾಡುತ್ತಿದ್ದಾರೆ. ಅವರು ಕಲಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದು ಹೇಳಿದರು.

ವಾಮಂಜೂರು ಅಮೃತೇಶ್ವರ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ ವಾಮಂಜೂರು ಅವರು ಮಾತನಾಡಿ, ಕಳೆದ 17 ವರ್ಷಗಳಿಂದ ನಿಸ್ವಾರ್ಥವಾಗಿ ಯಕ್ಷಗಾನ ಕಲೆಯ ಏಳ್ಗೆಗಾಗಿ ಬಾಲಕೃಷ್ಣ ಶೆಟ್ಟಿ ಅವರು ಶ್ರಮಿಸುತ್ತಿದ್ದಾರೆ. ನಗರದಾದ್ಯಂತ ಕಲಾಭಿಮಾನಿಗಳ, ಕಲಾಪೋ ಷಕರ ಸಹಕಾರದೊಂದಿಗೆ  ಯಕ್ಷಗಾ ನ ತಾಳಮದ್ದಳೆಯನ್ನು ಆಯೋಜಿಸಿ ಕಲಾರ ಸಿಕರಿಗೆ ರಸದೌತಣವನ್ನು ನೀಡುತ್ತಿದ್ದಾರೆ. ಬಾಲ ಕೃಷ್ಣ ಶೆಟ್ಟಿ ಅವರಿಗೂ, ಕಲಾಪೋಷಕರಿಗೂ ಕಲಾ ಮಾತೆಯ ಅನುಗ್ರಹ ಸದಾಯಿರಲಿ ಎಂದರು.

Advertisement

ಭ್ರಷ್ಟಾಚಾರ, ಅಪರಾಧ ನಿಯಂತ್ರಣ ಸಮಿತಿಯ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಭಾಸ್ಕರ ಶೆಟ್ಟಿ ಅವರು ಮಾತನಾಡಿ, ಮಹಾರಾಷ್ಟÅದಲ್ಲಿನ ಸಂಘ-ಸಂಸ್ಥೆಗಳು ನಮ್ಮ ನಾಡಿನ ಸಂಸ್ಕೃತಿ, ಕಲೆಯಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಕಲೆ ಹಾಗೂ ಕಲಾವಿದರ ಏಳ್ಗೆಗಾಗಿ ಬಾಲಕೃಷ್ಣ ಶೆಟ್ಟಿ ಅವರ ಕೊಡುಗೆ ಅಮೂಲ್ಯ. ಕಲಾವಿದರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಇತರ ಎಲ್ಲಾ ಸಂಘ-ಸಂಸ್ಥೆಗಳಿಂದ ನಡೆಯುತ್ತಿರಲಿ. ಆಗ ಯುವ ಕಲಾವಿದರಿಗೆ ಸ್ಪೂರ್ತಿ ಸಿಗುತ್ತದೆ. ನಾವೆಲ್ಲ ನಮ್ಮ ಸಂಸ್ಕೃತಿ, ಕಲೆ ಅಳಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ವೇದಿಕೆಯಲ್ಲಿ ಭಾಂಡೂಪ್‌ಪ್ರಿಯೇಶ್‌ ಇಂಡಸ್ಟಿÅàಸ್‌ ಇದರ ಸಿಎಂಡಿ ಶಂಕರ್‌ ಶೆಟ್ಟಿ ಮುಲುಂಡ್‌, ಉದ್ಯಮಿ ವಾಮನ್‌ ಶೆಟ್ಟಿ, ನಲಸೋಪರ ತುಳುಕೂಟದ ಅಧ್ಯಕ್ಷ ರಮೇಶ್‌ ಶೆಟ್ಟಿ ಕಾಪು, ಉದ್ಯಮಿ ರಾಘು ಪಿ. ಶೆಟ್ಟಿ, ರಜಕ ಸಂಘ ಮೀರಾರೋಡ್‌-ವಿರಾರ್‌ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷ ದೇವೇಂದ್ರ ಬುನ್ನನ್‌, ಉದ್ಯಮಿ ಸತೀಶ್‌ ಶೆಟ್ಟಿ, ಪಣಂಬೂರು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದ ಪಿ. ಟಿ. ರೈ ಯಾನೆ ಮಂಜು ಕಾವ ಮೊದಲಾದವರು ಉಪಸ್ಥಿತರಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ಕಲಾವಿದರಿಂದ ಮಹಿಷ ವರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾ ಸಂಘಟಕ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಗರದಲ್ಲಿ ಯಕ್ಷಗಾನ, ತಾಳಮದ್ದಳೆಗೆ ನೂತನ ಆಯಾಮವನ್ನು ಕಲ್ಪಿಸಿಕೊಟ್ಟವರು ಅಜೆಕಾರು ಬಾಲಕೃಷ್ಣ ಶೆಟ್ಟಿ ಎಂದರೆ ತಪ್ಪಾಗಲಾಗರದು. ಕಳೆದ 17 ವರ್ಷಗಳಿಂದ ಊರಿನ ಪ್ರಬುದ್ಧ ಕಲಾವಿದರನ್ನು ಆಹ್ವಾನಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುವುದರೊಂದಿಗೆ, ಗರಿಷ್ಠ ಪ್ರಮಾಣದ ನಿಧಿಯೊಂದಿಗೆ ಪ್ರಶಸ್ತಿ, ಪುರಸ್ಕಾರವನ್ನು ಪ್ರದಾನಿಸುತ್ತಿರುವುದು ಸುಲಭದ ಮಾತಲ್ಲ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಯುವ ಜನಾಂಗದಲ್ಲಿ ಯಕ್ಷಗಾನದ ಅಭಿರುಚಿಯನ್ನು ಹುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮುಂಬಯಿ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಅವರಿಗೆ ಸದಾಯಿರಲಿ. 
-ಎಸ್‌. ಎನ್‌. ಉಡುಪ , 
ಪ್ರಧಾನ ಅರ್ಚಕರು : ಜೆರಿಮೆರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next