Advertisement
ಪತ್ರಿಕಾಗೋಷ್ಠಿ ನಡೆಸಿದ ಮೃತರ ಸಹೋದರ ಪ್ರಕಾಶ್ ಪೂಜಾರಿ, ಆರೋಪಿಯ ತಂದೆ ಪ್ರಭಾವಿಗಳಾಗಿದ್ದಾರೆ. ಹಣದ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿ ತನ್ನ ಮಗ ಆರೋಪಿ ದಿಲೀಪ್ ಹೆಗ್ಡೆಯ ರಕ್ಷಣೆಗೆ ನಿಂತಿದ್ದಾರೆ. ಮಗನನ್ನು ಜೈಲಿನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದರು. ವೀಡಿಯೋದಲ್ಲಿ ಅವರು ನನ್ನ ಮಗ ತಪ್ಪೇ ಮಾಡಿಲ್ಲ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ. ಆರೋಪಿ ದಿಲೀಪ್ ಹೆಗ್ಡೆ ತಂದೆ ದೇವಸ್ಥಾನದಲ್ಲಿ ಮಗನ ಹೆಸರಿನಲ್ಲಿ ಪೂಜೆ ಮಾಡಿ ಕೊಲೆ ಆರೋಪಿ ಮಗನ ರಕ್ಷಿಸುತ್ತಿದ್ದಾರೆ ಎಂದರು. ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿ ಪ್ರತಿಮಾ, ಎರಡನೇ ಆರೋಪಿ ದಿಲೀಪ್ ಹೆಗ್ಡೆಯಾಗಿದ್ದಾರೆ. ಅದೇ ರೀತಿ ಚಿಕಿತ್ಸೆ ಪಡೆದ ಆಸ್ಪತ್ರೆ, ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆ ನಡೆಸಬೇಕು ಎಂದರು.
Related Articles
Advertisement
ಆಸ್ಪತ್ರೆಗಳ ಮೇಲೆ ಸಂಶಯವಿದೆ
ಮೃತರ ಸಹೋದರಿ ಶಶಿರೇಖಾ (ಚಿಕ್ಕಮ್ಮನ ಮಗಳು) ಮಾತನಾಡಿ, ಅಣ್ಣನ ಆರೋಗ್ಯ ಹದಗೆಟ್ಟಾಾಗ ಅತ್ತಿಗೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಸೌಖ್ಯಕ್ಕೆ ಒಳಗಾಗಿದ್ದ ಅಣ್ಣನಿಗೆ ಸ್ಥಳಿಯವಾಗಿ ಅಲ್ಲದೆ ಬೆಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗುತ್ತ ಬಂದಿದ್ದರು. ಆಸ್ಪತ್ರೆ, ವೈದ್ಯರು ಕೆಲ ಸಂಗತಿ ಮುಚ್ಚಿಟ್ಟಿರುವ ಸಾಧ್ಯತೆಯಿದೆ ಎಂದರು.
ಹಣದ ಅಮಿಷ ಆಫರ್ ಬಂದಿದ್ದವು: ಪ್ರತಿಮಾ ಸಹೋದರ
ಭಾವ ಮೃತಪಟ್ಟಾಗ ನನಗೆ ಸಂಶಯ ಬಂದಿತ್ತು. ಮುಖದಲ್ಲಿ ಗಾಯ ಕಂಡುಬಂದಿತ್ತು. ಸಹೋದರಿ ಪ್ರತಿಮಾಳನ್ನು ಬಾಯಿ ಬಿಡಿಸಲು ಪ್ರಯತ್ನಿಸಿದ್ದೆ. ಮರಣೋತ್ಸರ ಪರೀಕ್ಷೆ ವರದಿ ಬರಲಿ ಎಂದು ಕಾದಿದ್ದೆ. ಅನಂತರದಲ್ಲಿ ಅವಳು ಸ್ವತ: ಪ್ರಿಯಕರನ ಜತೆ ಸೇರಿ ಭಾವನನ್ನು ಪ್ರಿಯಕರನ ಜತೆ ಸೇರಿ ಕೊಲೆಗೈದ ಬಗ್ಗೆ ಆಕೆ ಒಪ್ಪಿದ್ದಳು. ಆಗ ನಾನೇ ಠಾಣೆಗೆ ದೂರು ನೀಡಲು ಮುಂದಾಗಿದ್ದೆ. ಅದಾದ ನಂತರದಲ್ಲಿ ನನಗೆ ಹಲವಾರು ಅನಾಮಧೇಯ ಕರೆಗಳು ಬಂದಿವೆ. ಬೆದರಿಕೆ ಕರೆಗಳು ಬಂದಿಲ್ಲ. ಹಣದ ಅಮಿಷದ ಕರೆಗಳು ಬಂದಿವೆ. 10ರಿಂದ 20 ಲಕ್ಷ ರೂ. ವರೆಗೆ ಅಮಿಷ ಒಡ್ಡಲಾಗಿತ್ತು. ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎನ್ನುವ ಆಫರ್ ಕೂಡ ಅದರಲ್ಲಿ ಸೇರಿತ್ತು. ನಾವು ಹಣಕ್ಕೆ ಬಗ್ಗುವವರಲ್ಲ. ಯಾವ ಬೆದರಿಕೆಗೆ ಬಗ್ಗುವುದಿಲ್ಲ. ನನ್ನ ರಕ್ತ ಸಂಬಂಧಿಯೇ ಆಗಲಿ, ಯಾರೇ ಆಗಲಿ ತಪ್ಪು ಮಾಡಿದರೇ ಅದು ತಪ್ಪೆ. ಆರಂಭದಲ್ಲಿ ನನ್ನ ಮನೆಯಲ್ಲಿ ಬೆಂಬಲ ಅಷ್ಟಾಗಿ ಸಿಕ್ಕಿರಲಿಲ್ಲ. ಈಗ ಅವರೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. ಇಬ್ಬರಿಗೆ ಜೀವವಾಧಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಸಹೋದರನಿಗೂ ವಿಷಪ್ರಾಶನ ಸಂಶಯ
ನನಗೂ ಆರೋಗ್ಯದಲ್ಲಿ ಏರುಪೇರಾಗಿದೆ. ನರಗಳು ಹಿಡಿದು ಕೊಂಡಂತಾಗುತ್ತಿದೆ. ನಾನು ಪ್ರತಿಮಾಳ ಮನೆಯಲ್ಲಿ ಒಂದೆರಡು ಬಾರಿ ಊಟ ಮಾಡಿದ್ದಿದೆ. ಆಕೆ ನನಗೂ ಆಹಾರದಲ್ಲಿ ವಿಷ ಬೆರೆಸಿರುವ ಬಗ್ಗೆ ನನಗೂ ಸಂಶಯವಿದೆ ಎಂದು ಶಾಕಿಂಗ್ ವಿಚಾರವನ್ನು ಸಹೋದರ ಸಂದೀಪ್ ಪೂಜಾರಿ ಬಹಿರಂಗಪಡಿಸಿದರು. ಡಿವೈಎಸ್ಪಿ ಅವರು ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ಈ ವೇಳೆ ತನಿಖೆ ಪಾರದರ್ಶಕವಾಗಿ ನಡೆಸಿ ಆರೋಪಿಗಳಿಗೆ ಖಂಡಿತ ಜೀವಾಧಿ ಶಿಕ್ಷೆ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದರು.