Advertisement

ಅಜಯ್‌ ಮಿಶ್ರಾ ರಾಜೀನಾಮೆ ಬೇಕು: ಪ್ರಿಯಾಂಕಾ ವಾದ್ರಾ

01:28 AM Oct 11, 2021 | Team Udayavani |

ವಾರಾಣಸಿ/ಲಕ್ನೋ: ಲಖೀಂಪುರ ಖೇರಿಯಲ್ಲಿ ಅ.3ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಹೊಣೆ ಹೊತ್ತು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ ಕುಮಾರ್‌ ಮಿಶ್ರಾ ರಾಜೀ ನಾಮೆ ನೀಡಲೇಬೇಕು. ಈ ಬೇಡಿಕೆ ಈಡೇ ರುವ ವರೆಗೆ ಹೋರಾಟ ಮುಂದುವರಿಯಲಿದೆ. ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಎಚ್ಚರಿಕೆ ನೀಡಿದ್ದಾರೆ.

Advertisement

ವಾರಾಣಸಿಯಲ್ಲಿ ರವಿವಾರ ಆಯೋ ಜಿಸಲಾಗಿದ್ದ “ಕಿಸಾನ್‌ ನ್ಯಾಯ ರ್‍ಯಾಲಿ’ಯಲ್ಲಿ ಮಾತನಾಡಿದ  ಅವರು, ದೇಶದಲ್ಲಿ ಬಿಜೆಪಿಯ ನಾಯಕರು ಮತ್ತವರ ಕೋಟ್ಯಧಿಪತಿ ಸ್ನೇಹಿತರನ್ನು ಬಿಟ್ಟು ಬೇರೆ ಯಾರೂ ಸುರಕ್ಷಿತವಾಗಿಲ್ಲ ಎಂದು ದೂರಿದ್ದಾರೆ. ಸಚಿವರ ಮಗ ರೈತರ ಮೇಲೆ ಕಾರು ಹರಿಸಿದ್ದಾನೆ. ಸರಕಾರ ಅವನನ್ನು ಕಾಪಾಡಲು ಯತ್ನಿಸುತ್ತಿದೆ. ಆರೋಪಿಗೆ ತನಿಖೆಗೆ ಹಾಜರಾಗಲು ಪೊಲೀಸರು ಆಹ್ವಾನ ನೀಡುವುದು ನಮ್ಮ ದೇಶದಲ್ಲಿ ಮಾತ್ರ ಸಾಧ್ಯ ಎಂದರು. ಲಕ್ನೋಗೆ ಆಗಮಿಸಲು ಸಮಯ ಇರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಲಖೀಂಪುರ ಖೇರಿಗೆ ಭೇಟಿ ನೀಡಿ, ನೊಂದವರಿಗೆ ಸಾಂತ್ವನ ಹೇಳಲು ವೇಳೆ ಇಲ್ಲ ಎಂದು ಆಕ್ಷೇಪಿಸಿದರು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ.

ಇದನ್ನೂ ಓದಿ:ಐಪಿಎಲ್‌ ಕ್ವಾಲಿಫೈಯರ್‌-1: 9ನೇ ಸಲ ಫೈನಲ್‌ ತಲುಪಿದ ಚೆನ್ನೈ

ಉಪವಾಸ: ನವರಾತ್ರಿ ನಿಮಿತ್ತ ಉಪ ವಾಸದಲ್ಲಿ ಇರುವ ಅಂಶವನ್ನು ಪ್ರಿಯಾಂಕ ವಾದ್ರಾ ಬಹಿರಂಗಪಡಿಸಿದರು. ಹೀಗಾಗಿ ದೇವಿ ದುರ್ಗೆಯನ್ನು ನೆನೆಯುವ ಮೂಲಕ ಭಾಷಣ ಆರಂಭಿಸುವುದಾಗಿ ಹೇಳಿದರು. ದುರ್ಗಾ ದೇವಿಯ ಸ್ತುತಿ ಮಾಡುವ ಮೂಲಕ ಭಾಷಣ ಆರಂಭಿಸಿದರು ವಾದ್ರಾ.

Advertisement

Udayavani is now on Telegram. Click here to join our channel and stay updated with the latest news.

Next