ಮುಂಬೈ: 14ನೇ ಆವೃತ್ತಿಯ ಐಪಿಎಲ್ ಕೂಟ ಕೊನೆಯ ಹಂತ ತಲುಪುತ್ತಿದೆ. ಲೀಗ್ ಹಂತ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದ್ದು, ನಂತರ ಪ್ಲೇ ಆಫ್ ಸೆಣಸಾಟ ನಡೆಯಲಿದೆ. ಇದರ ಮಧ್ಯೆ ಟೀಂ ಇಂಡಿಯಾದ ಮುಂದಿನ ನಾಯಕನ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.
ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿರುವ ಕಾರಣ ಮುಂದಿನ ನಾಯಕನ ಬಗ್ಗೆ ಚರ್ಚೆಗಳು ಆರಂಭವಾಗಿದೆ. ರೋಹಿತ್ ಶರ್ಮಾ ನಾಯಕನಾದರೆ, ಉಪ ನಾಯಕ ಯಾರು ಎಂಬ ಬಗ್ಗೆ ಹಲವು ಚರ್ಚೆಗಳು, ಅಭಿಪ್ರಾಯಗಳು ಕೇಳಿಬರುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಅಜಯ್ ಜಡೇಜಾ, ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ಅವರು ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ ಎಂದಿದ್ದಾರೆ.
ಇದನ್ನೂ ಓದಿ:“ನನ್ನ ಪುತ್ರ ಡ್ರಗ್ಸ್ ಸೇವಿಸಲಿ” ಎಂದಿದ್ದ ಶಾರುಖ್ ಖಾನ್ : ಹಳೆಯ ವಿಡಿಯೋ ವೈರಲ್
ನೀವು ರಾಹುಲ್ ನತ್ತ ಗಮನಿಸಿ, ಕಳೆದ ಎರಡು ವರ್ಷಗಳಿಂದ ಆತ ಪಂಜಾಬ್ ತಂಡದ ನಾಯಕನಾಗಿದ್ದಾನೆ. ಆದರೆ ಎರಡು ವರ್ಷದಲ್ಲಿ ಒಮ್ಮೆಯೂ ಆತನೊಬ್ಬ ‘ಲೀಡರ್’ ಎಂಬ ಭಾವನೆ ಬರಲಿಲ್ಲ. ಈ ತಂಡವು ಒಳ್ಳೆಯ ಅಥವಾ ಕೆಟ್ಟ ಪ್ರದರ್ಶನ ನೀಡಿದಾಲೆಲ್ಲಾ, ನಾವು ಕೆ ಎಲ್ ರಾಹುಲ್ ನತ್ತ ನೋಡುವುದಿಲ್ಲ. ಅಷ್ಟೇ ಅಲ್ಲದೆ, ಪಂಜಾಬ್ ಕಿಂಗ್ಸ್ ಇಂದು ಆಡುತ್ತಿರುವ ತಂಡ, ಅದರಲ್ಲಿ ಮಾಡಿದ ಬದಲಾವಣೆಗಳನ್ನು ಕೆಎಲ್ ರಾಹುಲ್ ಮಾಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಎಂದು ಅಜಯ್ ಜಡೇಜಾ ಪ್ರಶ್ನಿಸಿದರು.
ಭಾರತದ ನಾಯಕನಾಗುವಾತ ಸರಿಯಾಗಿ ತರ್ಕ ಮಾಡುವ ಗುಣ ಹೊಂದಿರಬೇಕು. ಯಾಕೆಂದರೆ ಆತನ ನಾಯಕ. ಆದರೆ ಐಪಿಎಲ್ ತಂಡವನ್ನು ಮುನ್ನಡೆಸುವುದು ಮತ್ತು ಭಾರತ ತಂಡವನ್ನು ಮುನ್ನಡೆಸುವುದರ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಅಜಯ್ ಜಡೇಜಾ ಹೇಳಿದರು.