Advertisement

ಪಬ್ ನಲ್ಲಿ ಜಗಳವಾಡಿ ಹೊಡೆತ ತಿಂದ್ರಾ ನಟ ಅಜಯ್ ದೇವಗನ್..?

03:56 PM Mar 29, 2021 | Team Udayavani |

ನವದೆಹಲಿ :  ಕುಡಿದ ಮತ್ತಿನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹೊಡೆತ ತಿಂದಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಜಯ್ ದೇವಗನ್ ಕೂಡ ಇದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ದೆಹಲಿಯ ಹೊರ ವಲಯದಲ್ಲಿರುವ ಏರೋ ಸಿಟಿ ಪಬ್ ನಲ್ಲಿ ಘಟನೆ ನಡೆದಿದೆ. ಆದ್ರೆ ಅಜಯ್ ದೇವಗನ್ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ. ಕಳೆದೆ 14 ತಿಂಗಳುಗಳಿಂದ ನಟ ಅಜಯ್ ದೇವಗನ್ ಆ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದಿದ್ದಾರೆ.

ಈ ಬಗ್ಗೆ ಸ್ಟೇಟ್ ಮೆಂಟ್ ನೀಡಿರುವ ವಕ್ತಾರರು, ಮಾಧ್ಯಮಗಳು ಯಾವುದಾದರೂ ಸುದ್ದಿಯನ್ನು ಪ್ರಸಾರ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಮಾಡಿ. ಈ ವಿಡಿಯೋದಲ್ಲಿ ನಟ ಅಜಯ್ ದೇವಗನ್ ಇದ್ದಾರೆ ಎಂಬುದು ಸುಳ್ಳು ಎಂದಿದ್ದಾರೆ.

ಸದ್ಯ ಅಜಯ್ ದೇವಗನ್, ತನ್ಹಾಜಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದ್ದಾರೆ. ಈ ಕೆಲಸವನ್ನು ಬಿಟ್ಟು ಪಬ್ ಗೆ ನಟ ಹೋಗಿಲ್ಲ ಎಂದು ಅಜಯ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

Advertisement

ಆ ವಿಡಿಯೋದಲ್ಲಿ ಇರುವುದು ಬಾಲಿವುಡ್ ನಟ ಅಜಯ್ ದೇವಗನ್ ಅಲ್ಲ. ಬದಲಿಗೆ ಕಾರು ಡಿಕ್ಕಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next