Advertisement

ಮಾಸ್ಕ್ ಧರಿಸಿ ಪಾಠ ಆಲಿಸಿದ ವಿದ್ಯಾರ್ಥಿಗಳು

03:23 PM Mar 08, 2020 | Naveen |

ಅಜ್ಜಂಪುರ: ಅಜ್ಜಂಪುರ ಸಮೀಪ ಗೆಜ್ಜೆಗೊಂಡನಹಳ್ಳಿಯ ಸಂದೀಪಿನಿ ಶಾಲಾ ಆಡಳಿತ ಮಂಡಳಿ ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಹ್ಯಾಂಡ್‌ ವಾಶ್‌ ಬಳಸುವಂತೆ ಸೂಚಿಸಿದೆ.

Advertisement

ಕೋವಿಡ್  – 1 9 ಸೋಂಕು ಭೀತಿ ಸೃಷ್ಟಿಸಿದೆ. ಸೋಂಕುಕಾರಕ ಕೊರೊನಾ ವೈರಸ್‌ ದೇಹ ಪ್ರವೇಶಿಸುವುದನ್ನು ತಡೆಯುವ ಸಾಧನದಲ್ಲಿ ಒಂದಾದ ಮಾಸ್ಕ್ ಅನ್ನು ಶಾಲಾ ಸಮಯದಲ್ಲಿ ಧರಿಸಬೇಕು ಮತ್ತು ಹ್ಯಾಂಡ್‌ ವಾಶ್‌ ಬಳಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಆದೇಶಿಸಿದೆ.

ಕೋವಿಡ್‌-19 ತಲ್ಲಣ ಉಂಟು ಮಾಡಿದೆ. ಹಬ್ಬುತ್ತಿರುವ ಸೋಂಕು ತಗುಲಿದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಈ ಹಿನ್ನೆಲೆಯಲ್ಲಿ ಅಜ್ಜಂಪುರ, ಬೆಟ್ಟದಾವರೆಕೆರೆ, ಹೊಳಲ್ಕೆರೆ, ಹೊಸದುರ್ಗ, ತಾಳೀಕಟ್ಟೆ ಮತ್ತು ಬೆಂಗಳೂರಿನಲ್ಲಿರುವ ಸಂದೀಪಿನಿ ಶಾಲಾ ಮಕ್ಕಳಿಗೆ ಮಾಸ್ಕ್ ಮತ್ತು ಹ್ಯಾಂಡ್‌ ವಾಶ್‌ ಬಳಸಲು ನಿರ್ದೇಶನ ನೀಡಲಾಗಿದೆ ಎಂದು ಸಂದೀಪಿನಿ ಸಮೂಹ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲೋಕೇಶ್ವರಪ್ಪ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ, ಕೋವಿಡ್‌-19 ಮತ್ತು ರೋಗ ಲಕ್ಷಣದ ಬಗ್ಗೆ ಅರಿವು ಮೂಡಿಸಲಾಗಿದೆ. ಸೋಂಕುಕಾರಕ ಕೊರೊನಾ ವೈರಸ್‌ ಹರಡುವಿಕೆ ಬಗ್ಗೆಯೂ ಹೇಳಲಾಗಿದೆ. ದೇಹದ ಶುಚಿತ್ವ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಯ ಆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಲು ತಿಳಿಸಲಾಗಿದೆ ಎಂದು ದೈಹಿಕ ಶಿಕ್ಷಕ ರಾಜು ತಿಳಿಸಿದರು.

ಮಾಸ್ಕ್ ಮತ್ತು ಹ್ಯಾಂಡ್‌ವಾಶ್‌ ಬಳಕೆ ಕೊರೊನಾ ಮಾತ್ರವಲ್ಲದೇ ಸಾಮಾನ್ಯ ಶೀತ, ಸೀನು, ಕೆಮ್ಮು, ಜ್ವರದಂತಹ ಕಾಯಿಲೆಗಳಿಗೆ ಕಾರಣ ಆಗುವ ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಹರಡುವುದನ್ನು ತಡೆಯುತ್ತದೆ. ಶಾಲೆ, ಮಕ್ಕಳ ಆರೋಗ್ಯ ರಕ್ಷಣೆಗಾಗಿ ಉತ್ತಮ ನಿರ್ಧಾರ ತಳೆದಿದೆ ಎಂದು ಪೋಷಕ ನಟರಾಜ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಶಾಲಾ ವಾಹನ, ಪ್ರಾರ್ಥನಾ ಸಮಯ, ಆಟೋಟಗಳಲ್ಲಿ ವಿದ್ಯಾರ್ಥಿಗಳು ಗುಂಪಾಗಿ ಇರುತ್ತಾರೆ. ಈಗಂತೂ ಭಯಾನಕ ಕೋವಿಡ್‌-19 ಭಯ ಮೂಡಿಸಿದೆ. ಸೋಂಕುಕಾರಕ ಕೊರೊನಾ ವೈರಸ್‌ ದೇಹ ಪ್ರವೇಶ ತಡೆಯಲು ಯುನಿಸೆಫ್‌ ಕ್ರಮಗಳನ್ನು ಸೂಚಿಸಿದೆ. ಅದರ ಅನ್ವಯ ಕೆಲವನ್ನು ಪಾಲಿಸಲು ಕ್ರಮವಹಿಸಲಾಗಿದೆ ಎಂದು ಶಾಲಾ ಪ್ರಾಂಶುಪಾಲೆ ಜ್ಯೋತಿ ಹೇಳಿದ್ದಾರೆ.

ಯುನಿಸೆಫ್‌ ಪ್ರಕಟಣೆಯಲ್ಲಿ ಕೊರೊನಾ ವೈರಸ್‌ ಗಾತ್ರದಲ್ಲಿ 400-500 ಮೈಕ್ರೋ ಸೂಕ್ಷ ¾ ದಪ್ಪವಾಗಿದ್ದು, ಮಾಸ್ಕ್ ಇದರ ಪ್ರವೇಶ ತಡೆಯುತ್ತದೆ. 26-27 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕೂಡಾ ವೈರಸ್‌ ಅನ್ನು ಕೊಲ್ಲುತ್ತದೆ. ಬಿಸಿ ನೀರು ಕುಡಿಯುವುದು, ಬಿಸಿಲಿಗೆ ದೇಹ ಒಡ್ಡುವುದು ಉತ್ತಮ. ಬಿಸಿ ನೀರು ಮತ್ತು ಉಪ್ಪಿನಿಂದ ಗಾರ್ಗಿಲ್‌ ಮಾಡುವುದು ಲಂಗ್ಸ್‌ಗೆ ವೈರಸ್‌ ಪ್ರವೇಶಿಸುವುದನ್ನು ತಡೆಯುತ್ತದೆ. ಇವು ಕೊರೊನಾ ವೈರಸ್‌ ಪ್ರವೇಶ ತಡೆಯುವ ಪರಿಣಾಮಕಾರಿ ಕ್ರಮಗಳಾಗಿದ್ದು, ಅನುಸರಿಸುವಂತೆ ಯುನೆಸೆಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next