Advertisement

ಅಯ್ಯೋ!…ಎಂದ ಪ್ರಧಾನಿ ಮೋದಿ ; ಸಂತಸ ಹಂಚಿಕೊಂಡ ಶ್ರದ್ಧಾ ಜೈನ್

02:52 PM Feb 13, 2023 | Team Udayavani |

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ನಟಿ ಶ್ರದ್ಧಾ ಜೈನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Advertisement

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ (ಫೆ 12) ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದ ವೇಳೆ ದಿಗ್ಗಜ ನಟರು, ನಿರ್ಮಾಪಕರು ಕ್ರಿಕೆಟ್ ರಂಗದ ತಾರೆಗಳನ್ನು ಭೇಟಿಯಾಗಿದ್ದರು.

”ನಮಸ್ಕಾರ, ಹೌದು, ನಾನು ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ನನಗೆ ಅವರ ಮೊದಲ ಮಾತು ‘ಅಯ್ಯೋ!’. ನಾನು ಕಣ್ಣು ಮಿಟುಕಿಸುತ್ತಿಲ್ಲ, ಅದು ನನ್ನ ‘ಓ ಮೈ ಜೋಡ್, ಅವರು ನಿಜವಾಗಿಯೂ ಹೇಳಿದ್ದಾರೆ, ಇದು ನಿಜವಾಗಿಯೂ ನಡೆದಿದೆ!!!!’ ನೋಡಿ. ಭಾರತದ ಪ್ರಧಾನ ಮಂತ್ರಿಗಳಿಗೆ ಧನ್ಯವಾದ! ಎಂದು ಸಂಭ್ರಮವನ್ನು ಶ್ರದ್ಧಾ ಜೈನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.


ಅರಳು ಹುರಿದಂತೆ ಮಾತನಾಡುವ ಶ್ರದ್ಧಾ ಜೈನ್ ಅವರು ರೇಡಿಯೋ ಜಾಕಿಯಾಗಿ ಒಂಬತ್ತು ವರ್ಷ ಖ್ಯಾತಿ ಪಡೆದಿದ್ದರು. ಸ್ವಲ್ಪ ಸಮಯ ಟಿವಿ ಉದ್ಯಮದಲ್ಲೂ ಕೆಲಸ ಮಾಡಿದರು. ಇಂಟರ್ನೆಟ್‌ನಲ್ಲಿ ”ಅಯ್ಯೋ ಶ್ರದ್ಧಾ” ಎಂದು ನೂರಾರು ಭಿನ್ನ, ವಿಭಿನ್ನ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದಾರೆ. ಆಯುಷ್ಮಾನ್ ಖುರಾನಾ ನಟನೆಯ ಬಾಲಿವುಡ್ ಚಿತ್ರ ‘ಡಾಕ್ಟರ್​ ಜಿ’ನಲ್ಲೂ ಶ್ರದ್ಧಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಧಾನಿ ಮೋದಿ ಅವರು ಚಿತ್ರನಟರಾದ ಯಶ್, ರಿಷಬ್ ಶೆಟ್ಟಿ, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ, ನಿರ್ಮಾಪಕ ವಿಜಯ್ ಕಿರಗಂದೂರು, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸಿನಿಮಾ, ಯುವಜನ, ಕ್ರೀಡಾ ಮೂಲಸೌಕರ್ಯ, ಒಲಿಂಪಿಕ್ಸ್ ಮತ್ತು ಕ್ರೀಡಾ ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next