Advertisement
ಧೂಳು ಏಳದೆ ಮನೆ ಕಟ್ಟುವುದು ಕಷ್ಟವಾದರೂ, ಆದಷ್ಟೂ ಕಡಿಮೆ ಧೂಳು ಹುಟ್ಟುವಂತೆ ಮಾಡುವುದು ಕಷ್ಟವೇನಲ್ಲ. ಸಾಮಾನ್ಯವಾಗಿ ಸುಲಭ ಆಗಲಿ ಎಂದು ಯಾವುದಾದರೂ ಒಂದು ವಸ್ತುವನ್ನು ಮಶೀನ್ ಬಳಸಿ ಕಟ್ ಮಾಡುವಾಗ ನೀರನ್ನು ಬಳಸುವುದಿಲ್ಲ. ಇದರಿಂದಾಗಿ ಅನಗತ್ಯವಾಗಿ ಧೂಳೇಳುತ್ತದೆ. ಟೈಲ್ಸ್ ಇಲ್ಲವೇ ಗ್ರಾನೈಟ್ ಕಲ್ಲುಗಳನ್ನು ನೆಲದ ಮೇಲೆ ಕತ್ತರಿಸಬೇಕಾದರೆ, ಕೊಳವೆಯಿಂದ ನೀರನ್ನು ಹರಿಸಿಕೊಳ್ಳುತ್ತಾರಾದರೂ, ಗೋಡೆಗಳ ಮೇಲೆ ಗ್ರೂವ್ ಕಟ್ಟಿಂಗ್ ಮಾಡಬೇಕಾದರೆ, ನೀರು ಹಾಕದೆ ಡ್ರೆ„ ಕಟ್ಟಿಂಗ್ ಮಾಡುತ್ತಾರೆ. ಇದರಿಂದ ಅತಿಯಾಗಿ ಧೂಳು ಉತ್ಪತ್ತಿಯಾಗುತ್ತದೆ. ಸ್ವಲ್ಪ ಕೆಲಸ ಹೆಚ್ಚೆನಿಸಿದರೂ, ಎಲೆಕ್ಟ್ರಿಕ್ ಇಲ್ಲ, ಸ್ಯಾನಿಟರಿ ಪೈಪ್ ಅಳವಡಿಸಲು ಬೇಕಾದ ಗಾಡಿ ತೋಡಬೇಕಾದರೆ, ಗೋಡೆಗೆ ನಾಲ್ಕಾರು ಬಾರಿ ನೀರು ಚಿಮುಕಿಸಿ, ಅದು ಚೆನ್ನಾಗಿ ಒದ್ದೆಯಾದ ನಂತರ ಗ್ರೂವ್ ಕಟ್ಟಿಂಗ್ ಮಾಡಿದರೆ, ಧೂಳು ಏಳುವುದು ಕಡಿಮೆ ಆಗುತ್ತದೆ.
ಮನೆ ಪ್ಲಾನ್ ಮಾಡುವಾಗ ಸಾಮಾನ್ಯವಾಗಿ ಈಶಾನ್ಯದಿಂದ ಬೀಸುವ ಶೀತಗಾಳಿಯ ಬಗ್ಗೆ ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಮನೆಗೆ ಚಳಿಗಾಲ ಇನ್ನಿಲ್ಲದಂತೆ ಕಾಡುತ್ತದೆ. ಹಾಗೆಯೇ ಮನೆ ತುಂಬ ಧೂಳು ತುಂಬಿಕೊಂಡು ಒಣವಾತಾವರಣದ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ಈಶಾನ್ಯದಲ್ಲಿರುವ ಕೋಣೆಗಳಿಗೆ ಈ ಅವಧಿಯಲ್ಲಿ ಗಾಳಿ ಒಳಾಂಗಣದಲ್ಲಿ ಅಡ್ಡಹಾಯದಂತೆ ಎಚ್ಚರ ವಹಿಸಬೇಕು. ಇದನ್ನು ಮಾಡುವುದು ಕಷ್ಟವೇನಲ್ಲ. ಸಾಮಾನ್ಯವಾಗಿ ಎರಡು ಅಕ್ಕಪಕ್ಕದ ಗೋಡೆಗಳಿಗೆ ಕಿಟಕಿಗಳನ್ನು ಇಟ್ಟು ಕ್ರಾಸ್ ವೆಂಟಿಲೇಷನ್ ಮಾಡುವುದು ಮಾಮೂಲಿಯಾಗಿದ್ದು, ಚಳಿಗಾಲದಲ್ಲಿ, ಒಂದು ಕಡೆಯದನ್ನು ಮಾತ್ರ ತೆಗೆದುಕೊಂಡು ಮತ್ತೂಂದನ್ನು ಮುಚ್ಚುವಂತೆ ಮಾಡಿಕೊಂಡರೆ, ಕೋಣೆಯೊಳಗೆ ತಣ್ಣನೆಯ ಗಾಳಿ ನೇರವಾಗಿ ಪ್ರವೇಶಿಸುವುದನ್ನು ತಡೆಯಬಹುದು. ಇದರೊಂದಿಗೆ ಸಾಕಷ್ಟು ಧೂಳು ಹಾಗೂ ಒಣಹವೆಯನ್ನು ತಡೆದಂತೆಯೂ ಆಗುತ್ತದೆ.
Related Articles
ಈ ಬಗ್ಗೆ ಎಚ್ಚರವಿರಲಿ.
Advertisement
ಮನೆಯಿಂದ ಹೊರಗೆ ಚಾಚಿದಂತಿರುವ ಭಾಗಗಳ ಅತಿಯಾದ ಧೂಳು ಇರುತ್ತದೆ. ಚಳಿಗಾಲದಲ್ಲಿ ಇನ್ನೂ ಹೆಚ್ಚು ಶೇಖರಣೆಗೊಳ್ಳುತ್ತದೆ. ಇದು ಗಾಳಿ ಸ್ವಲ್ಪ ಜೋರಾಗಿ ಬೀಸಿದಾಗ ಮನೆಯೊಳಗೆ ಪ್ರವೇಶಿಸುತ್ತದೆ. ಹೀಗಾಗಿ, ಬಾಲ್ಕನಿಗಳ ಮೇಲೆ ಧೂಳು ಶೇಖರಣೆ ಕಡಿಮೆಮಾಡಲು, ಅಲ್ಲಿ ನಾಲ್ಕಾರು ಹೂಕುಂಡಗಳನ್ನು ಇಡಲು ಮನೆಯ ವಿನ್ಯಾಸ ಮಾಡುವಾಗಲೇ ಪ್ಲಾನ್ ಮಾಡಿಟ್ಟರೆ, ನಂತರ ನಮಗೆ ಸಣ್ಣದೊಂದು ಕೈತೋಟ ಸೃಷ್ಟಿಯಾಗಿ, ವಾತಾವರಣದ ವೈಪರಿತ್ಯಗಳನ್ನು ಸರಿದೂಗಿಸಿಕೊಂಡು ಹೋಗಲು ನೆರವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಜ್ಜಾ ಪೋರ್ಟಿಕೋಗಳಿಗೆ ಧೂಳು ಮತ್ತೂಂದು ಶೇಖರಣೆ ಆಗದಿರಲಿ ಎಂದು ಬಾಕ್ಸ್ ಮಾದರಿಯ ವಿನ್ಯಾಸವನ್ನು ಮಾಡುವುದಿಲ್ಲ. ಸಜ್ಜಾಗಳಿಗೆ ಸ್ವಲ್ಪ ಇಳಿಜಾರು ಕೊಟ್ಟರೆ, ನೀರು ಸರಾಗವಾಗಿ ಹೋಗುವುದರೊಂದಿಗೆ, ಧೂಳೂ ಹೆಚ್ಚು ಶೇಖರಣೆ ಆಗಲು ಆಸ್ಪದವಿರುವುದಿಲ್ಲ. ಇದೇ ರೀತಿಯಲ್ಲಿ, ಕಿಟಕಿಯ ಕೆಳಗೆ ಬರುವ ಸಿಲ್ ಅನ್ನು ಸ್ವಲ್ಪ ಇಳಿಜಾರಾಗಿ ಮಾಡಿಕೊಂಡರೆ, ಅಲ್ಲೂ ಧೂಳು ಶೇಖರಣೆಗೊಂಡು, ಕಿಟಕಿಯ ಮೂಲಕ ಮನೆಯನ್ನು ಪ್ರವೇಶಿಸುವುದು ತಪ್ಪುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 98441 32826.
ಆರ್ಕಿಟೆಕ್ಟ್ ಕೆ. ಜಯರಾಮ್