Advertisement

Lal Salaam: “ನನ್ನ ತಂದೆ ಸಂಘಿಯಲ್ಲ..” ಮಗಳ ಮಾತು ಕೇಳಿ ಭಾವುಕರಾದ ರಜಿನಿಕಾಂತ್

11:35 AM Jan 27, 2024 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ನಿರ್ದೇಶನದ ʼಲಾಲ್ ಸಲಾಂʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಶುಕ್ರವಾರ (ಜ.26 ರಂದು) ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದ ಅದ್ಧೂರಿಯಾಗಿ ನೆರವೇರಿದೆ.

Advertisement

ಚೆನ್ನೈನ ಶ್ರೀ ಸಾಯಿರಾಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಲಾಲ್ ಸಲಾಮ್’ ಆಡಿಯೋ ಬಿಡುಗಡೆ ನಡೆಯಿತು.

ಈ ವೇಳೆ ನಿರ್ದೇಶಕಿ ತನ್ನ ತಂದೆ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದಾರೆ.

ಕಳದೆ ಕೆಲ ಸಮಯದಿಂದ, ವಿಶೇಷವಾಗಿ ರಾಮಮಂದಿರ ಉದ್ಘಾಟನೆ ಬಳಿಕ ರಜಿನಿಕಾಂತ್‌ ಅವರನ್ನು ಒಂದು ಧರ್ಮದ ಹಾಗೂ ರಾಜಕೀಯ ಪಕ್ಷದ ಬೆಂಬಲಿಗ ಎನ್ನುವ ಹಣೆಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಐಶ್ವರ್ಯಾ, “ಸಾಮಾನ್ಯವಾಗಿ ನಾನು ಸಾಮಾಜಿಕ ಜಾಲತಾಣದಿಂದ ದೂರು ಉಳಿಯುತ್ತೇನೆ. ಆದರೆ ನನ್ನ ತಂಡದವರು ಏನಾಗುತ್ತಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ನೀಡುತ್ತಾರೆ. ಇದನ್ನು ನೋಡಿ ನನಗೆ ನಿಜಕ್ಕೂ ಸಿಟ್ಟು ಬರುತ್ತದೆ. ನಾವೂ ಮನುಷ್ಯರು. ಇತ್ತೀಚಿನ ದಿನಗಳಲ್ಲಿ ಅನೇಕರು ನನ್ನ ತಂದೆಯನ್ನು ಸಂಘಿ ಎಂದು ಕರೆಯುತ್ತಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ನಂತರ ನಾನು ಯಾರನ್ನಾದರೂ ಸಂಘಿ ಎಂದರೆ ಏನು ಎಂದು ಕೇಳಿದೆ ಮತ್ತು ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ, ರಜಿನಿಕಾಂತ್ ಒಬ್ಬ ಸಂಘಿ ಅಲ್ಲ. ಅವರು ಸಂಘಿ ಆಗಿದ್ದರೆ ನನ್ನ ‘ಲಾಲ್ ಸಲಾಂ’ ಸಿನಿಮಾ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.

Advertisement

ಇದನ್ನು ಕೇಳಿದ ರಜಿನಿಕಾಂತ್ ಭಾವುಕರಾಗಿದ್ದಾರೆ.

ʼಲಾಲ್‌ ಸಲಾಂ’ ಒಂದು ಸ್ಪೋರ್ಟ್ಸ್‌ ಡ್ರಾಮಾವಾಗಿದ್ದು, ವಿಷ್ಣು ವಿಶಾಲ್‌, ವಿಕ್ರಾಂತ್‌ ಜೊತೆಗೆ ವಿಶೇಷ ಪಾತ್ರದಲ್ಲಿ ರಜಿನಿಕಾಂತ್‌ ನಟಿಸಿದ್ದಾರೆ. ಇದೇ ಫೆಬ್ರವರಿ 9 ರಂದು ಸಿನಿಮಾ ಬಿಡುಗಡೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next