Advertisement

ಮುಸ್ಲಿಂ ವಿರೋಧಿ ಕಂಟೆಂಟ್: ರಜಿನಿಕಾಂತ್‌ ‘Lal Salaam’ ಸಿನಿಮಾಕ್ಕೆ ಬ್ಯಾನ್‌ ಬಿಸಿ

01:39 PM Feb 03, 2024 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼಲಾಲ್‌ ಸಲಾಂʼ ರಿಲೀಸ್‌ಗೆ ರೆಡಿಯಾಗಿದೆ.

Advertisement

ʼಲಾಲ್‌ ಸಲಾಂʼ ಐಶ್ವರ್ಯಾ ನಿರ್ದೇಶನದ ಮೂರನೇ ಸಿನಿಮಾ. ಈ ಹಿಂದೆ ಅವರು ʼ3ʼ(2011), ʼ ವೈ ರಾಜಾ ವೈʼ(2015) ಸಿನಿಮಾವನ್ನು ಮಾಡಿದ್ದರು. ʼಲಾಲ್‌ ಸಲಾಂʼ ಸಿನಿಮಾದಲ್ಲಿ ವಿಷ್ಣು ವಿಶಾಲ್,ವಿಕ್ರಾಂತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಈಗಾಗಲೇ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಕ್ರಿಕೆಟ್‌ ಕಥೆಯಲ್ಲಿ ಹಿಂದೂ – ಮುಸ್ಲಿಂ ವಿಚಾರ ಸಿನಿಮಾದಲ್ಲಿರಲಿದೆ. ಇದೇ ಕಾರಣದಿಂದ ಸಿನಿಮಾಕ್ಕೆ ಬ್ಯಾನ್‌ ಬಿಸಿ ತಟ್ಟಿದೆ. ಕುವೈಟ್‌ನಲ್ಲಿ ಸಿನಿಮಾ ರಿಲೀಸ್‌ಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಸಾವಿನ ಬಗ್ಗೆ ಸುದ್ದಿ ಹಬ್ಬಿಸಿದ್ದಕ್ಕೆ ಹೆಮ್ಮೆಯಿದೆ.. ವಿಡಿಯೋ ಪೋಸ್ಟ್‌ ಮಾಡಿದ ಪೂನಂ ಪಾಂಡೆ

ಮುಸ್ಲಿಂ ವಿರೋಧಿ ವಿಚಾರವನ್ನು ಸಿನಿಮಾದಲ್ಲಿ ತೋರಿಸಲಾಗಿದ್ದು, ಈ ಕಾರಣದಿಂದ ಕುವೈಟ್‌ನಲ್ಲಿ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ.  ಇದೇ ಫೆ. 9ರಂದು ಸಿನಿಮಾ ತೆರೆ ಕಾಣಲಿದೆ.

Advertisement

ಗಲ್ಫ್ ದೇಶಗಳಲ್ಲಿ ಭಾರತದ ಸಿನಿಮಾಗಳು ಬ್ಯಾನ್‌ ಆಗುವುದು ಹೊಸತೇನಲ್ಲ. ಇತ್ತೀಚೆಗೆ ಹೃತಿಕ್‌ ಅವರ ʼಫೈಟರ್‌ʼ, ಮಮ್ಮುಟ್ಟಿ ಅವರ ʼಕಾತಲ್ – ದಿ ಕೋರ್’, ದಳಪತಿ ವಿಜಯ್ ವಿ ಅವರ ‘ಬೀಸ್ಟ್’, ‘ಸೀತಾ ರಾಮಂ’, ತಮಿಳು ಚಿತ್ರ ‘ಎಫ್‌ಐಆರ್’ ಮತ್ತು ಮೋಹನ್ ಲಾಲ್ ಅವರ ‘ಮಾನ್ ಸ್ಟರ್’ ‌ಸಿನಿಮಾಗಳು ಬ್ಯಾನ್‌ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next