Advertisement

Aishwarya Rajinikanth: 2ನೇ ಮದುವೆಗೆ ರೆಡಿಯಾದ್ರಾ ರಜಿನಿ ಪುತ್ರಿ? ಆಪ್ತರಿಂದ ಸ್ಪಷ್ಟನೆ

11:25 AM Jul 11, 2023 | Team Udayavani |

ಚೆನ್ನೈ: ರಜಿನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್ ಸದ್ಯ ʼಲಾಲ್‌ ಸಲಾಂʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪುತ್ರಿ ನಿರ್ದೇಶನದ ಸಿನಿಮಾದಲ್ಲಿ ತಂದೆ ರಜಿನಿಕಾಂತ್‌ ಅವರು ಕಾಣಿಸಿಕೊಳ್ಳಲಿದ್ದಾರೆ.

Advertisement

ಈಗಾಗಲೇ ಸಿನಿಮಾದ ಪೋಸ್ಟರ್‌ ಹಾಗೂ ರಜಿನಿಕಾಂತ್‌ ಅವರ ಲುಕ್‌ ಸದ್ದು ಮಾಡಿದೆ. ಇತ್ತೀಚೆಗೆ ಐಶ್ವರ್ಯಾ ರಜನಿಕಾಂತ್ ಅವರು ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಆದರೆ ಇದೀಗ ಈ ಬಗ್ಗೆ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.

18 ವರ್ಷಗಳಿಂದ ಜೊತೆಗಿದ್ದ ಧನುಷ್ – ಐಶ್ವರ್ಯಾ ತಾವು ದೂರವಾಗುವುದಾಗಿ 2022 ರಲ್ಲಿ ಘೋಷಿಸಿದ್ದರು. ಆದರೆ ಅಧಿಕೃತವಾಗಿ ಇನ್ನು ಇಬ್ಬರು ವಿಚ್ಚೇದನವನ್ನು ಪಡೆದಿಲ್ಲ. ಮಕ್ಕಳಾದ ಲಿಂಗಾ ಹಾಗೂ ಯಾತ್ರಾ ಅವರೊಂದಿಗೆ ಇಬ್ಬರು ಸಮಯ ಕಳೆಯುತ್ತಿದ್ದಾರೆ. ಧನುಷ್‌ ಇತ್ತೀಚೆಗೆ ತಿರುಪತಿಗೆ ಮಕ್ಕಳೊಂದಿಗೆ ತೆರಳಿ ಕೇಶ ಮುಂಡನವನ್ನು ಮಾಡಿಸಿದ್ದರು. ಐಶ್ವರ್ಯಾ ಐಪಿಎಲ್‌ ಸಮಯದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸಿದ್ದರು.

ಇದನ್ನೂ ಓದಿ: LGM: ನನ್ನನು CSK ತಂಡಕ್ಕೆ ಸೇರಿಸಿಕೊಳ್ಳಿ; ಯೋಗಿ ಬಾಬು ಮಾತಿಗೆ ಧೋನಿ ಕೊಟ್ಟ ರಿಪ್ಲೈ ವೈರಲ್‌

ಕಳೆದ ಕೆಲ ದಿನಗಳಿಂದ ಐಶ್ವರ್ಯಾ ಅವರು ಎರಡನೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. “ಈ ಸುದ್ದಿಗಳೆಲ್ಲವೂ ಸುಳ್ಳು. ಇದರಲ್ಲಿ ಯಾವುದೇ ಸತ್ಯವಿಲ್ಲ. ಐಶ್ವರ್ಯಾ ಎರಡನೇ ಮದುವೆ ಆಗುತ್ತಿಲ್ಲ” ಎಂದು ಮೂಲಗಳು ʼಇಂಡಿಯಾ ಟುಡೇʼಗೆ ಹೇಳಿದೆ.

Advertisement

ʼಲಾಲ್ ಸಲಾಂʼನಲ್ಲಿ ರಜನಿಕಾಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಮೇ.8 ರಂದು ರಿವೀಲ್‌ ಆಗಿದ್ದು,ʼಮೊಯ್ದೀನ್ ಭಾಯ್ʼ ಸೂಪರ್‌ ಸ್ಟಾರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next