Advertisement

ಮೆಲ್ಬರ್ನ್ನಲ್ಲಿ ಐಶ್‌ ಧ್ವಜಾರೋಹಣ

07:45 AM Aug 13, 2017 | Team Udayavani |

ಹೊಸದಿಲ್ಲಿ: ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ಐಎಫ್ಎಫ್ಎಂನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಮೊದಲ ಭಾರತೀಯ ಚಿತ್ರನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನಡೆದ “ಇಂಡಿ ಯನ್‌ ಫಿಲಂ ಫೆಸ್ಟಿವಲ್‌ ಆಫ್ ಮೆಲ್ಬರ್ನ್’ (ಐಎಫ್ಎಫ್ಎಂ)ನಲ್ಲಿ ಐಶ್ವರ್ಯಾ ಅವರು ಧ್ವಜಾರೋಹಣ ನಡೆಸಿದ್ದಾರೆ. ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿರುವ ಐಎಫ್ಎಫ್ಎಂ, “ಭಾರತದ 70ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಐಶ್ವರ್ಯಾ ರೈ ಬಚ್ಚನ್‌ ಫೆಡ್‌ ಸ್ಕ್ವೇರ್‌ನಲ್ಲಿ ಭಾರತದ ಧ್ವಜಾರೋಹಣ ಮಾಡಿದರು’ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಜತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಐಶ್ವರ್ಯಾ ಮತ್ತು ಅವರ ಮಗಳು ಆರಾಧ್ಯಾ ಬಚ್ಚನ್‌ರ ಫೋಟೊವನ್ನು ಕೂಡ ಅಪ್‌ಲೋಡ್‌ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next