Advertisement

ಏರ್‌ಟೆಲ್‌ ನಿಂದ ಇನ್ನು 3ಜಿ ಸೇವೆ ಇಲ್ಲ!

11:07 AM Aug 03, 2019 | mahesh |

ಮುಂಬಯಿ: ದೇಶದಲ್ಲಿ 3ಜಿ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಭಾರ್ತಿ ಏರ್‌ಟೆಲ್‌ ಟೆಲಿಕಾಂ ಕಂಪೆನಿ ನಿರ್ಧರಿಸಿದೆ.

Advertisement

2020 ಮಾರ್ಚ್‌ನಿಂದ ಇದು ಅನ್ವಯವಾಗಲಿದ್ದು, ಈಗಾಗಲೇ ಕೋಲ್ಕತಾದಿಂದ ರದ್ದುಗೊಳಿಸುವ ಪ್ರಕ್ರಿಯೆ ಶುರುವಾಗಿದೆ. ಮುಂದಿನ ಡಿಸೆಂಬರ್‌ನಿಂದ ಮಾರ್ಚ್‌ ವೇಳೆಗೆ ಇನ್ನೂ 6-7 ಸರ್ಕಲ್‌ ಗ‌ಳಲ್ಲಿ 3ಜಿ ಸೇವೆ ರದ್ದಾಗಲಿದೆ ಎಂದ ಕಂಪೆನಿ ಹೇಳಿಕೊಂಡಿದೆ.

4ಜಿ ನೆಟ್‌ವರ್ಕ್‌ ಎಲ್ಲೆಡೆ ಸಿಗುತ್ತಿರುವುದರಿಂದ 3ಜಿ ಸೇವೆಯ ಅಗತ್ಯ ಅಷ್ಟು ಇಲ್ಲವಾಗಿದೆ. ನಾವೂ 2ಜಿಯಿಂದ 4ಜಿಗೆ ಅಪ್‌ಗ್ರೇಡ್‌ ಆಗಿದ್ದೇವೆ ಎಂದು ಆದ್ದರಿಂದ 3ಜಿ ಸೇವೆ ರದ್ದಾಗಲಿದೆ ಎಂದು ಏರ್‌ಟೆಲ್‌ ನ ಭಾರತ ಮತ್ತು ದ.ಏಷ್ಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ್‌ ವಿಠಲ್‌ ಹೇಳಿದ್ದಾರೆ.

ಸದ್ಯ ಏರ್‌ಟೆಲ್‌ ನಲ್ಲಿ 84 ಲಕ್ಷ 4ಜಿ ಬಳಕೆದಾರರು ಮತ್ತು 1.20 ಕೋಟಿ ಇಂಟರ್ನೆಟ್‌ ಬಳಕೆದಾರರಿದ್ದಾರೆ. ಇದರಲ್ಲಿ 95 ಲಕ್ಷ ಮಂದಿ 4ಜಿ ಇಂಟರ್ನೆಟ್‌ ಬಳಕೆದಾರರು. ಏರ್‌ಟೆಲ್‌ ಗ್ರಾಹಕರ ಮಾಸಿಕ ಇಂಟರ್ನೆಟ್‌ ಬಳಕೆ ಸರಾಸರಿ ಪ್ರಮಾಣ 11 ಜಿ.ಬಿ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next