Advertisement

ಏರ್‌ಟೆಲ್‌ ರೋಮಿಂಗ್‌ ಫ್ರೀ

03:50 AM Feb 28, 2017 | Team Udayavani |

ನವದೆಹಲಿ: ಮೊಬೈಲ್‌ ಫೋನ್‌ ಸೇವಾ ಕ್ಷೇತ್ರದಲ್ಲಿ ಜಿಯೋ ನಡೆಸುತ್ತಿರುವ ಕ್ರಾಂತಿಯ ಪರಿಣಾಮ ಈಗ ಉಳಿದ ಕಂಪನಿಗಳ ಸೇವೆಯ ಮೇಲೆಯೂ ಬೀರುತ್ತಿದೆ. ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಉಳಿದ ಕಂಪನಿಗಳ ಬಂಪರ್‌ ಆಫ‌ರ್‌ಗಳ ನಡುವೆ ಇದೀಗ ಭಾರ್ತಿ ಏರ್‌ಟೆಲ್‌ ಹೊರ ಮತ್ತು ಒಳ ಕರೆಗಳ ಮೇಲಿನ ರೋಮಿಂಗ್‌ ಶುಲ್ಕ ತೆರವುಗೊಳಿಸಿದೆ.

Advertisement

ಏಪ್ರಿಲ್‌ 1ರಿಂದ ಪರಿಷ್ಕೃತ ಬದಲಾ­ವಣೆ ಜಾರಿಗೆ ಬರಲಿದೆ. ಸ್ವತಃ ಕಂಪನಿಯೇ ಈ ಬದಲಾವಣೆಯನ್ನು “ವಾರ್‌ ಆನ್‌ ರೋಮಿಂಗ್‌’ ಎಂದು ಹೇಳಿಕೊಂಡಿದೆ. ತನ್ನ ಗ್ರಾಹಕರಿಗೆ ರೋಮಿಂಗ್‌ ಮೇಲಿನ ಶುಲ್ಕ ಹೊರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಿರುವುದಾಗಿ ಹೇಳಿದೆ.

ಮೊನ್ನೆ ಮೊನ್ನೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರಿಲಯನ್ಸ್‌ ಜಿಯೋ, ಎಸ್ಸೆಮ್ಮೆಸ್‌ ಮತ್ತು ಡೇಟಾ ಬಳಕೆಯ ಮೇಲೆ ಭಾರತೀಯ ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಆಫ‌ರ್‌ ನೀಡಿದ ಬೆನ್ನಲ್ಲೇ ಭಾರ್ತಿ ಏರ್‌ಟೆಲ್‌ ರೋಮಿಂಗ್‌ ಶುಲ್ಕವನ್ನು ಕಡಿತಗೊಳಿಸಿ ಪರೋಕ್ಷವಾಗಿ ಸಮರಕ್ಕೆ ಇಳಿದಿದೆ.  ಏರ್‌ಟೆಲ್‌ ಅಂತಾರಾಷ್ಟ್ರೀಯ ಕರೆಗಳ ಮೇಲಿನ ದರವನ್ನು ಶೇ.90ರಷ್ಟು ಕಡಿತಗೊಳಿಸಿ, ಪ್ರತಿ ನಿಮಿಷಕ್ಕೆ 3.ರೂ. ಶುಲ್ಕ ಪಡೆಯಲು ನಿರ್ಧರಿಸಿದೆ. ಜತೆ ಜೊತೆಗೇ ಡೇಟಾ ದರದಲ್ಲಿಯೂ ಶೇ.90ರಷ್ಟು ಕಡಿತಗೊಳಿಸಿ, ಪ್ರತಿ ಎಂಬಿಗೆ 3 ರೂ. ಪಡೆಯುವುದಾಗಿ ಹೇಳಿದೆ. ಆದರೆ ಈ ಪರಿಷ್ಕೃತ ದರ ರೋಮಿಂಗ್‌ನಲ್ಲಿ ಇರುವಾಗ ಮಾತ್ರ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next