ನವದೆಹಲಿ: ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ರೀಚಾರ್ಜ್ ಮತ್ತು ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ, ಇನ್ನೊಂದು ಪ್ರಮುಖ ಕಂಪೆನಿ ಭಾರ್ತಿ ಏರ್ಟೆಲ್ ಸಹ ತನ್ನ ಮೊಬೈಲ್ ರೀಚಾರ್ಜ್, ಪ್ಲಾನ್ ಗಳ ದರಗಳನ್ನು ಏರಿಕೆ ಮಾಡಿದೆ. ಈ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.
179 ರೂ. ಗಳಿಗೆ 28 ದಿನ ವ್ಯಾಲಿಡಿಟಿ 2ಜಿಬಿ ಡಾಟಾ, ಅನಿಯಮಿತ ಕರೆ ಇದ್ದ ಪ್ಲಾನ್ 199 ರೂ.ಗಳಿಗೆ ಏರಿಕೆಯಾಗಿದೆ. 84 ದಿನಗಳಿಗೆ 6 ಜಿಬಿ ಡಾಟಾ ಪ್ಲಾನ್ 455 ರೂ. ದರ ಇದ್ದುದು 509 ರೂ.ಗಳಿಗೆ ಹೆಚ್ಚಳವಾಗಿದ್ದು, 365 ದಿನಗಳಿಗೆ 24 ಜಿಬಿ ಡಾಟಾ ಪ್ಲಾನ್ 1799 ರೂ. ಇದ್ದುದು, 1999 ರೂ.ಗೆ ಏರಿಕೆಯಾಗಿದೆ.
ಇನ್ನು, 28 ದಿನಗಳಿಗೆ ಪ್ರತಿದಿನ 1 ಜಿಬಿ ಡಾಟಾ, ಅನಿಯಮಿತ ಕರೆ ಇದ್ದ 265 ರೂ. ಪ್ಲಾನ್ 299 ರೂ.ಗೆ ಏರಿಕೆಯಾಗಿದ್ದರೆ, 1.5 ಜಿಬಿ ಪ್ರತಿದಿನ ಡಾಟಾ ಇದ್ದ 299 ರೂ. ಪ್ಲಾನ್ 349 ರೂ.ಗಳಿಗೆ ಏರಿಕೆಯಾಗಿದೆ. 2.5 ಜಿಬಿ ಪ್ರತಿದಿನ ಡಾಟಾ ಪ್ಲಾನ್ 359 ರೂ.ಗಳಿಂದ 409 ರೂ.ಗೆ ಹಾಗೂ ಪ್ರತಿದಿನ 3 ಜಿಬಿ ಡಾಟಾ ಇದ್ದ 399 ರೂ. ಪ್ಲಾನ್ 449 ರೂ.ಗಳಿಗೆ ಹೆಚ್ಚಳವಾಗಿದೆ.
ಹಾಗೆಯೇ ಪೋಸ್ಟ್ ಪೇಡ್ ಪ್ಲಾನ್ ಗಳ ದರವೂ ಏರಿಕೆ ಕಂಡಿದ್ದು, 399 ರೂ. 40 ಜಿಬಿ ಡಾಟಾ ಮಾಸಿಕ ಪ್ಲಾನ್ 449 ರೂ.ಗಳಿಗೆ, 499 ರೂ. 75 ಡಾಟಾ ಪ್ಲಾನ್ 549 ರೂ.ಗಳಿಗೆ, 105 ಜಿಬಿ ಡಾಟಾ 599 ರೂ.ಗಳ ಫ್ಯಾಮಿಲಿ ಪ್ಲಾನ್ 699 ರೂ.ಗೆ, 999 ರೂ. ಫ್ಯಾಮಿಲಿ ಪ್ಲಾನ್ 190 ಜಿಬಿ ಡಾಟಾ, 1199 ರೂ.ಗಳಿಗೆ ಏರಿಕೆಯಾಗಿದೆ. ಪೋಸ್ಟ್ ಪೇಡ್ ಪ್ಲಾನ್ ಗಳಿಗೆ ಶೇ. 18ರಷ್ಟು ಜಿಎಸ್ಟಿ ಹೆಚ್ಚುವರಿ ಎಂಬುದು ಗಮನಾರ್ಹ!
ಈ ಎಲ್ಲ ದರಗಳು ದೇಶದ ಎಲ್ಲ ಸರ್ಕಲ್ ಗಳಿಗೂ ಅನ್ವಯಿಸುತ್ತದೆ ಎಂದು ಭಾರ್ತಿ ಏರ್ ಟೆಲ್ ಪ್ರಕಟಣೆ ತಿಳಿಸಿದೆ.