Advertisement

ಜಿಯೋ-ಏರ್‌ಟೆಲ್ 1,500 ಕೋಟಿ ರೂ. ‌ವ್ಯಾವಹಾರಿಕ ಒಪ್ಪಂದ

12:51 PM Apr 08, 2021 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಕ್ಷೇತ್ರದ ಪ್ರತಿಸ್ಪರ್ಧಿಗಳಾದ ರಿಲಯನ್ಸ್‌ ಜಿಯೋ ಹಾಗೂ ಏರ್‌ಟೆಲ್‌, ತಮ್ಮ ಮುಂದಿನ
ವ್ಯವಹಾರಕ್ಕಾಗಿ ಪರಸ್ಪರ ಕೈ ಜೋಡಿಸಿವೆ.

Advertisement

ಇತ್ತೀಚೆಗೆ ಕೇಂದ್ರ ಸರಕಾರ ನಡೆಸಿದ್ದ ತರಂಗ ಗುಚ್ಛ ಹರಾಜು ಪ್ರಕ್ರಿಯೆಯಲ್ಲಿ ತಾವು ಕೊಂಡಿರುವ ತರಂಗಗಳಲ್ಲಿ ಸುಮಾರು 1,500 ಕೋಟಿ ರೂ. ಮೊತ್ತದ ತರಂಗಗಳನ್ನು ಹಂಚಿಕೊಳ್ಳುವ ಬಗ್ಗೆ ಎರಡೂ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ.

ಒಪ್ಪಂದದ ಪ್ರಕಾರ, ಆಂಧ್ರಪ್ರದೇಶ, ದಿಲ್ಲಿ ಹಾಗೂ ಮುಂಬಯಿಯ ದೂರಸಂಪರ್ಕ ವ್ಯಾಪ್ತಿಯಲ್ಲಿ ಏರ್ ಟೆಲ್‌ ಕಂಪೆನಿಯ 800 ಮೆಗಾಹರ್ಟ್ಸ್ ಬ್ಯಾಂಡ್‌ ಅನ್ನು
ಜಿಯೋ ಬಳಸಿಕೊಳ್ಳಲಿದೆ.

ಇದರಲ್ಲಿ 1,038 ಕೋಟಿ ರೂ. ಹಣವನ್ನು ಜಿಯೋ ಕಂಪೆನಿ, ಏರ್‌ಟೆಲ್‌ಗೆ ನೇರವಾಗಿ ವರ್ಗಾಯಿಸಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ತರಂಗಾಂತರಗಳ ಬಳಕೆಯ ನಿರ್ವಹಣೆ ವೆಚ್ಚವನ್ನು ಕೂಡ ಜಿಯೋ ಕಂಪೆನಿಯೇ ವಹಿಸಿಕೊಳ್ಳಲಿದೆ. ಹಾಗಾಗಿ ಒಟ್ಟಾರೆ 1,497 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ದಿವಾಳಿ ಆದೇಶ: ಓಯೋ ಮೇಲ್ಮನವಿ?
ಹೊಸದಿಲ್ಲಿ: ಹೊಟೇಲ್‌ ಕ್ಷೇತ್ರದಲ್ಲಿ ಹೆಸರು ಮಾಡಿರುವ ಓಯೋ ಸಂಸ್ಥೆಯ ಅಂಗ ಸಂಸ್ಥೆ ಓಯೋ ಹೊಟೇಲ್ಸ್‌ ಆ್ಯಂಡ್‌ ಹೋಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ರಾಷ್ಟ್ರೀಯ ಕಂಪೆನಿ ಕಾನೂನುಗಳ ನ್ಯಾಯಮಂಡಳಿ (ಎನ್‌ಸಿಎಲ್‌ಟಿ), ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಆದೇಶ ಹೊರಡಿಸಿದೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಓಯೋ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದೆ. ಮಾ.30 ರಂದು ಎನ್‌ಸಿಎಲ್‌ಟಿಯಿಂದ ಈ ಆದೇಶ ಹೊರಬಿದ್ದಿದ್ದು, ಆದೇಶದ ಬಗ್ಗೆ ತಕರಾರು ಅರ್ಜಿಗಳನ್ನು ಸಲ್ಲಿಸಲು ಓಯೋಗೆ 15ರ ವರೆಗೆ ಗಡುವು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next