Advertisement

ಏರ್‌ಟೇಲ್ ನೆಟ್ವರ್ಕ್‌ ಸಿಗದೇ ಪರದಾಟ

02:14 PM Jul 21, 2019 | Suhan S |

ಬೇತಮಂಗಲ: ಕ್ಯಾಸಂಬಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಏರ್‌ಟೇಲ್ ನೆಟ್ವರ್ಕ್‌ ಸಮಸ್ಯೆಯಿಂದ ಗ್ರಾಹಕರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತು ಕರೆ ಮಾಡು ವುದಕ್ಕೂ ನೆಟ್ ವರ್ಕ್‌ ಸಿಗದೇ ಗ್ರಾಹಕರು ದಿನ ನಿತ್ಯ ಏರ್‌ಟೇಲ್ ಕಂಪನಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಕ್ಯಾಸಂಬಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಈ ನೆಟ್ವರ್ಕ್‌ ಸಮಸ್ಯೆಯಿಂದ ಅಂತರ್ಜಾಲ ಸಂಪರ್ಕವೂ ಕಡಿತವಾಗಿ ಹಲವು ಕಚೇರಿಗಳಲ್ಲಿ ನಿತ್ಯದ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜನ ನಿತ್ಯ ಕಚೇರಿಗೆ ಅಲೆದಾಡುವಂತಹ ಸ್ಥಿತಿ ಇದೆ.ರಾಮಸಾಗರ, ಬೂಡದಿಮಿಟ್ಟ, ಮಹ ದೇವಪುರ, ಸರ್ವರೆಡ್ಡಿಹಳ್ಳಿ, ರಾಯಸಂದ್ರ, ಕಂಗಾಡ್ಲಹಳ್ಳಿ, ಐವಾರಹಳ್ಳಿ, ಕಣ್ಣೂರು, ಕೂಳೂರು ಗ್ರಾಮಗಳಲ್ಲಿ 6 ತಿಂಗಳಿನಿಂದ ನೆಟ್ವರ್ಕ್‌ ಸಮಸ್ಯೆ ಇದೆ. ಮೊಬೈಲ್ ಸೆಟ್, ಏರ್‌ಟೇಲ್ ಸಿಮ್‌ ಇದ್ದರೂ ಬಳಕೆಗೆ ನೆಟ್ವರ್ಕ್‌ಗೇ ಸಿಗುತ್ತಿಲ್ಲ. ಈಗ ಚಿಕ್ಕಮಕ್ಕಳಿಂದಿಡಿದು ವೃದ್ಧ ರವರೆಗೂ ಮೊಬೈಲ್ ಬಳಕೆ ಮಾಡುತ್ತಾರೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಮುಂದಾದ ಸಾಮಾಜಿಕ ಜಾಲತಾಣ ಗಳನ್ನು ಬಳಸಲು ಎಲ್ಲರಿಗೂ ನೆಟ್ ಬೇಕೇಬೇಕು. ಡಿಜಿ ಟಲ್ ಇಂಡಿಯಾ ಎಂಬ ಘೋಷಣೆ ಮಾಡ ಲಾಗಿದೆ. ಆದ್ರೆ ಬಳಕೆಗೆ ನೆಟ್ವರ್ಕ್‌ ಸರಿಯಾಗಿ ಸಿಗುತ್ತಿಲ್ಲ ಎಂಬುದು ಗ್ರಾಹಕರ ಅಳಲು.

ತುರ್ತು ಕರೆಗೂ ಬರ: ಗ್ರಾಮದಲ್ಲಿ ಅಪಘಾತ, ಆರೋಗ್ಯ ಸಮಸ್ಯೆ, ಇತರೆ ಗಲಾಟೆಗಳಾದಾಗ ಪೊಲೀಸ್‌, ಆ್ಯಂಬುಲೆನ್ಸ್‌ಗೆ ಮೊಬೈಲ್ನಲ್ಲಿ ಕರೆ ಮಾಡೋಣ ಅಂದ್ರೆ ನೆಟ್ವರ್ಕ್‌ ಸಿಗುವುದಿಲ್ಲ. ಮನೆ ಮಹಡಿ, ದೂರದ ಬಯಲು ಪ್ರದೇಶಕ್ಕೆ ಹೋಗಿ ನೆಟ್ವರ್ಕ್‌ ಬರುವಕಡೆ ನಿಂತು ಕರೆ ಮಾಡಬೇಕಿದೆ.

 

● ಆರ್‌.ಪುರುಷೋತ್ತಮ್‌ರೆಡ್ಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next