ನವದೆಹಲಿ:ದೇಶದ ಎರಡನೇ ಅತೀ ದೊಡ್ಡ ನೆಟ್ವರ್ಕ್ ಕಂಪನಿಯಾದ ಏರ್ ಟೆಲ್ ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ಬೆಳಗ್ಗೆ ಹತ್ತು-ಹದಿನೈದು ನಿಮಿಷಗಳ ಕಾಲ ಡೌನ್ ಆಗಿರುವುದಾಗಿ ವರದಿಯಾಗಿದ್ದು, ಈ ಬಗ್ಗೆ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಪತ್ತೆಯಾಗಿ 2 ತಿಂಗಳ ಬಳಿಕ ದಲಿತ ಯುವತಿಯ ಶವ ಪತ್ತೆ; ಮಾಜಿ ಸಚಿವರ ಪುತ್ರನೇ ಪ್ರಮುಖ ಆರೋಪಿ
ಏರ್ ಟೆಲ್ ಬ್ರಾಡ್ ಬ್ಯಾಂಡ್ ಕಾರ್ಯಾಚರಣೆ ನಿಲ್ಲಿಸಿದ್ದು, ನಮಗೆ ಮೊಬೈಲ್ ಪೋನ್ ಗಳಲ್ಲಿ ಕರೆಗಳನ್ನು ಮಾಡಲು ಹಾಗೂ ಕರೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.
ಏರ್ ಟೆಲ್ ನೆಟ್ವರ್ಕ್ ಡೌನ್ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಳಕೆದಾರರು ಟ್ವೀಟರ್ ನಲ್ಲಿ #AIrteldown ಎಂಬ ಹ್ಯಾಶ್ ಟ್ಯಾಗ್ ಇಂದು ಟ್ವೀಟರ್ ನಲ್ಲಿ ಟ್ರೆಂಡ್ ಆಗಿತ್ತು. ದೆಹಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ್, ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏರ್ ಟೆಲ್ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸಿದ್ದರು.
ಏರ್ ಟೆಲ್ ಸಿಗ್ನಲ್ ಗೆ ಸಂಬಂಧಿಸಿದಂತೆ ಸುಮಾರು 4,000ದಷ್ಟು ದೂರುಗಳು ದಾಖಲಾಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಏರ್ ಟೆಲ್, ಕೂಡಲೇ ನೆಟ್ ವರ್ಕ್ ಡೌನ್ ಸಮಸ್ಯೆಯನ್ನು ಪರಿಹರಿಸಿದ್ದು, ಇದೀಗ ತಮ್ಮ ನೆಟ್ವರ್ಕ್ ಎಂದಿನಂತೆ ಕಾರ್ಯಾಚರಿಸುತ್ತಿರುವುದಾಗಿ ಸ್ಪಷ್ಟನೆ ನೀಡಿತ್ತು.