Advertisement

Airstrike; ಅಫ್ಘಾನಿಸ್ಥಾನದಲ್ಲಿ ಪಾಕ್‌ನಿಂದ ವೈಮಾನಿಕ ದಾಳಿ: 8 ಸಾವು

01:11 AM Mar 19, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ ಸೇನಾಪಡೆ ಅಫ್ಘಾನಿಸ್ಥಾನದ ಪಕ್ತಿಕಾ ಮತ್ತು ಖೋಸ್ತ್ ಪ್ರಾಂತಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 3 ಮಕ್ಕಳು, 3 ಮಹಿಳೆಯರು ಸೇರಿ 8 ಮಂದಿ ಅಸುನೀಗಿದ್ದಾರೆ. ಕಳೆದ ಶನಿವಾರ ಟಿಟಿಪಿ ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಗೆ ಪಾಕ್‌ನ 7 ಜನ ಸೈನಿಕರು ಮೃತಪಟ್ಟಿದ್ದರು. ಅದಕ್ಕೆ ಪ್ರತೀ ಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ಥಾನ ಸರಕಾರ ಕೂಡ ದಾಳಿಯನ್ನು ಖಚಿತಪಡಿಸಿದೆ. ಜತೆಗೆ ನಾಗರಿಕರ ಮೇಲೆ ಮಾಡಿದ ದಾಳಿಯನ್ನು ಖಂಡಿಸಿದೆ. ದಾಳಿಗೆ ಒಳಗಾದ ಪಕ್ತಿಕಾ ಪ್ರಾಂತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5,000ದಿಂದ 6 ಸಾವಿರ ತೆಹ್ರೀಕ್‌-ಇ- ತಾಲಿಬಾನ್‌ ಪಾಕಿಸ್ಥಾನ್‌ ಸಂಘಟನೆಯ ಉಗ್ರರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next