Advertisement

ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣ

07:44 PM Mar 02, 2021 | Adarsha |

ವಿಜಯಪುರ: ವಿಜಯಪುರ ವಿಮಾನ ನಿರ್ಮಾಣ ಕಾಮಗಾರಿ ಉತ್ತಮ ಗುಣಮಟ್ಟದೊಂದಿಗೆ ವೇಗವಾಗಿ ನಡೆಯುತ್ತಿದ್ದು ನಿಗ ದಿತ ಅವ ಧಿಗಿಂತ ಮುಂಚಿತವಾಗಿ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

Advertisement

ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಅವರು, 95 ಕೋಟಿ ರೂ. ವೆಚÌದಲ್ಲಿ ಮೊದಲಹಂತದ ಕಾಮಗಾರಿ ತ್ವರಿತವಾಗಿ  ನಡೆಯುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿರುವುದು ತೃಪ್ತಿಕರಸಂಗತಿಯಾಗಿದೆ. 2ನೇ ಹಂತದ ಕಾಮಗಾರಿ 125 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದರು.

ನಂತರ ಡೂಪ್ಲೆಕ್ಸ್‌ ಕೋರ್ಟ್‌ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿದ ಅವರು, ಈಕಾಮಗಾರಿ ಪೂರ್ಣಗೊಂಡಿದ್ದು ಕಂಪ್ಯೂಟರ್‌  ಜೋಡಣೆ, ಇಂಟರ್‌ ನೆಟ್‌ ಸಂಪರ್ಕ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಗುಣಮಟ್ಟ ಹಾಗೂ ಕಟ್ಟಡ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next