Advertisement

ವಿಮಾನ ನಿಲ್ದಾಣ ಮಾಹಿತಿ ಪಡೆದ ಸಚಿವರು

12:38 PM Dec 17, 2019 | Suhan S |

ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಸಂಸದ ಭಗವಂತ ಖೂಬಾ ಅವರು ಸೋಮವಾರ ನಗರದ ಹೊರವಲಯದ ಚಿದ್ರಿ ಬಳಿಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡ ವೀಕ್ಷಿಸಿದರು.

Advertisement

ಇದೆ ವೇಳೆ ಸಚಿವರು, ಭಾರತೀಯ ವಿಮಾನ ನಿಲ್ದಾಣದ ಪ್ರಾಧಿ ಕಾರ ಅಧಿ ಕಾರಿಗಳು, ಕೆಎಸ್‌ ಐಐಡಿಸಿ ತಜ್ಞರ ತಂಡ ಮತ್ತು ಎಂಜಿಆರ್‌ ಕಂಪನಿಯ ಅಧಿಕಾರಿಗಳಿಂದ ವಿಮಾನ ನಿಲ್ದಾಣದ ಪ್ರಗತಿಯ ಮಾಹಿತಿ ಪಡೆದರು. ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳಿಗೆ ಸಚಿವರು ಇದೇ ವೇಳೆ ಸೂಚಿಸಿದರು. ಬಳಿಕ ಮಾತನಾಡಿದ ಸಚಿವರು, ಬೀದರನಿಂದ ವಿಮಾನಯಾನ ಸೇವೆಯು ಬರುವ ಜ. 26ರಂದು ಆರಂಭವಾಗಲಿದೆ. ಸದ್ಯ ಬೀದರ-ಬೆಂಗಳೂರಿಗೆ ಸಂಚಾರ ಆರಂಭವಾಗಲಿದೆ. ಇಲ್ಲಿಂದ ವಿಮಾನಯಾನ ಸೇವೆ ಬೇಗ ಆರಂಭವಾಗಬೇಕು ಎಂಬುದು ಜಿಲ್ಲೆಯ ಸರ್ವಜನರ ಆಶಯವಾಗಿತ್ತು. ಹತ್ತಾರು ವರ್ಷಗಳಿಂದ ಇದಕ್ಕೆ ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ವಿಮಾನಯಾನ ಆರಂಭಕ್ಕೆ ಸಂಬಂಧಿಸಿದ ಕಾರ್ಯವು ಯುದ್ಧೋಪಾದಿಯಲ್ಲಿ ಆರಂಭವಾಗಿದೆ. ಈ ಕಾರ್ಯಕ್ಕೆ ವೇಗ ಹೆಚ್ಚಿಸುವ ಸಂಬಂಧ ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವೀಕ್ಷಣೆ ನಡೆಸಲಾಗುತ್ತಿದೆ. ಆಯಾ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಜ. 26ಕ್ಕೆ ವಿಮಾನಯಾನ ಸೇವೆ ಆರಂಭವಾಗಿ 10 ವರ್ಷಗಳ ಬಹುದಿನದ ಕನಸು ನನಸಾಗಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದನ್ನು ಪ್ರಾರಂಭ ಮಾಡಿದ್ದರು. ಅಂತೆಯೇ ಅವರಿಂದಲೇ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ನಮ್ಮ ಸುದೈವ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಪ್ರಶಾಂತ ಜಾಧವ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next