ಹುಬ್ಬಳ್ಳಿ: ಕೋವಿಡ್-19ರ ಲಾಕ್‌ಡೌನ್ ನಂತರ ನಗರದ ವಿಮಾನ ನಿಲ್ದಾಣದಿಂದ ವಿಮಾನಯಾನಿಗಳ ಸಂಖ್ಯೆ ಹೆಚ್ಚುತ್ತಲಿದ್ದು, ನಿಲ್ದಾಣವು ಮೊದಲಿನ ಕಳೆಯತ್ತ ಸಾಗುತ್ತಿದೆ.
ನಗರದಿಂದ ಡಿಸೆಂಬರ್‌ನಲ್ಲಿ 353 ವಿಮಾನಗಳು ಹಾರಾಟ ನಡೆಸಿದರೆ, ಜನವರಿಯಲ್ಲಿ ಇದರಸಂಖ್ಯೆಯು 473ಕ್ಕೆ ಏರಿದೆ. ಫೆ. 12ರಂದು ಒಂದೇ ದಿನ1331 ಪ್ರಯಾಣಿಕರು ದೇಶದ ವಿವಿಧ ಪ್ರದೇಶಗಳಿಗೆ ಇಲ್ಲಿನ ವಿಮಾನ ನಿಲ್ದಾಣ ಮೂಲಕ ವಿಮಾನಯಾನ ಮಾಡಿದ್ದಾರೆ. ಇದು ಕೋವಿಡ್-19ರ ನಂತರ ನಡೆಸಿದ ಕಾರ್ಯಾಚರಣೆ ವೇಳೆ ಅತೀ ಹೆಚ್ಚು ಪ್ರಯಾಣಿಕರ ಚಲನವಲನವಾಗಿದೆ.
ಫೆ. 12ರಂದು ಇಂಡಿಗೋದ ಚೆನ್ನೈ- ಮುಂಬಯಿ ನಡುವಿನ ವಿಮಾನದಲ್ಲಿ 57ಪ್ರಯಾಣಿಕರು ಹುಬ್ಬಳ್ಳಿಗೆ ಆಗಮಿಸಿದರೆ,ಇದೇ ವಿಮಾನದಲ್ಲಿ 69 ಪ್ರಯಾಣಿಕರುಹುಬ್ಬಳ್ಳಿಯಿಂದ ಪ್ರಯಾಣಿಸಿದ್ದಾರೆ. ಅದೇರೀತಿ ಸ್ಟಾರ್‌ಏರ್‌ಲೈನ್ಸ್‌ದ ತಿರುಪತಿ-ಹುಬ್ಬಳ್ಳಿ ವಿಮಾನದಲ್ಲಿ 35ಪ್ರಯಾಣಿಕರು ಆಗಮಿಸಿದರೆ, ಹುಬ್ಬಳ್ಳಿ-ತಿರುಪತಿವಿಮಾನದಲ್ಲಿ 43 ಪ್ರಯಾಣಿಕರು ತೆರಳಿದ್ದಾರೆ. ಬೆಂಗಳೂರು-ಹಿಂಡನ್ ವಿಮಾನದಲ್ಲಿ 46 ಜನರುಆಗಮಿಸಿದರೆ, 48 ಜನರು ಪ್ರಯಾಣಿಸಿದ್ದಾರೆ.ಇಂಡಿಗೋದ ಮುಂಬಯಿ-ಕೊಚ್ಚಿನ್ ವಿಮಾನದಲ್ಲಿ68 ಪ್ರಯಾಣಿಕರು ಆಗಮಿಸಿದರೆ, 42 ಪ್ರಯಾಣಿಕರು ತೆರಳಿದ್ದಾರೆ. ಕೊಚ್ಚಿನ್-ಗೋವಾ ವಿಮಾನದಲ್ಲಿ 58 ಪ್ರಯಾಣಿಕರು ಆಗಮಿಸಿದರೆ, 75 ಪ್ರಯಾಣಿಕರು ತೆರಳಿದ್ದಾರೆ. ಸ್ಟಾರ್ ಏರ್‌ಲೈನ್‌ದ ಹಿಂಡನ್-ಬೆಂಗಳೂರುವಿಮಾನದಲ್ಲಿ 47 ಪ್ರಯಾಣಿಕರು ಆಗಮಿಸಿದರೆ, 42 ಜನರು ಪ್ರಯಾಣಿಸಿದ್ದಾರೆ.
ಇಂಡಿಗೋದ ಬೆಂಗಳೂರು-ಹುಬ್ಬಳ್ಳಿ ವಿಮಾನದಲ್ಲಿ 74 ಪ್ರಯಾಣಿಕರು ಆಗಮಿಸಿದರೆ, ಹುಬ್ಬಳ್ಳಿ-ಬೆಂಗಳೂರುವಿಮಾನದಲ್ಲಿ 76 ಜನರು ತೆರಳಿದ್ದಾರೆ. ಗೋವಾ-ಚೆನ್ನೈ ವಿಮಾನದಲ್ಲಿ 22 ಜನರು ಆಗಮಿಸಿದರೆ, 73ಪ್ರಯಾಣಿಕರು ಯಾನ ಬೆಳೆಸಿದ್ದಾರೆ. ಅಹ್ಮದಾಬಾದ್-ಹುಬ್ಬಳ್ಳಿ ನಡುವಿನ ಬೋಯಿಂಗ್ ವಿಮಾನದಲ್ಲಿ 136 ಪ್ರಯಾಣಿಕರು ಆಗಮಿಸಿದರೆ, ಇದೇ ವಿಮಾನದಲ್ಲಿ ಹುಬ್ಬಳ್ಳಿಯಿಂದ 163 ಜನರು ಅಹ್ಮದಾಬಾದ್‌ಗೆಪ್ರಯಾಣಿಸಿದ್ದಾರೆ. ಬೆಂಗಳೂರು-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಬೆಂಗಳೂರು ವಿಮಾನದಲ್ಲಿ ತಲಾ 78 ಪ್ರಯಾಣಿಕರು ಆಗಮಿಸಿದ್ದಾರೆ ಹಾಗೂ ತೆರಳಿದ್ದಾರೆ.
ಫೆ. 12ರಂದು ಒಂದೇ ದಿನ 1331 ಜನರು ವಿಮಾನಯಾನ ಮಾಡಿದ್ದು, ಅದರಲ್ಲಿ 622 ಪ್ರಯಾಣಿಕರು ಪರಸ್ಥಳಗಳಿಂದ ಹುಬ್ಬಳ್ಳಿಗೆ ಆಗಮಿಸಿದರೆ, 709 ಜನರು ನಗರದಿಂದ ಪರಸ್ಥಳಕ್ಕೆತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್-19ರ ಕಾರ್ಯಾಚರಣೆ ನಂತರ ನಗರಕ್ಕೆ ಆಗಮಿಸುವ ಹಾಗೂತೆರಳುವ ವಿಮಾನಯಾನಿಗಳ ಸಂಖ್ಯೆದಿನದಿಂದದಿನಕ್ಕೆ ಹೆಚ್ಚುತ್ತಲಿದೆ. ಫೆ. 12ರಂದು 1331ಪ್ರಯಾಣಿಕರು ವಿಮಾನಯಾನ ಮಾಡಿದ್ದಾರೆ.ಅದೇರೀತಿ ಫೆ. 19ರಂದು ಸಹ ಅಂದಾಜು 1500 ಆಸು-ಪಾಸಿನಲ್ಲಿ ಜನರು ವಿಮಾನಯಾನ ಮಾಡಿದ್ದಾರೆ.
–ಪ್ರಮೋದ ಠಾಕರೆ, ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ