Advertisement

ವಿಮಾನ ನಿಲ್ದಾಣ: 34.74 ಲ.ರೂ. ಮೌಲ್ಯದ ಚಿನ್ನ ವಶ

12:30 AM May 16, 2019 | Sriram |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ದುಬಾೖನಿಂದ ಸ್ಪೈಸ್‌ ಜೆಟ್‌ ವಿಮಾನಲ್ಲಿ ಬಂದಿಳಿದ ವ್ಯಕ್ತಿಯೊಬ್ಬನಿಂದ 34,74,570 ರೂ. ಮೌಲ್ಯದ 1052.90 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Advertisement

24 ಕ್ಯಾರೆಟ್‌ ಪರಿಶುದ್ಧತೆಯ ಈ ಚಿನ್ನವನ್ನು 2 ಪಾದರಸ ಲೇಪಿತ ಗಟ್ಟಿ ರೂಪ ದಲ್ಲಿ ನಿಕಾಯ್‌ ಬ್ರಾಂಡ್‌ನ‌ ಮಿಕ್ಸರ್‌ನ ಒಳಗಿರಿಸಿ ಸಾಗಿಸಲು ಯತ್ನಿಸಲಾಗಿತ್ತು. ಕಸ್ಟಮ್ಸ್‌ ಅಧಿಕಾರಿಗಳು ಲಗ್ಗೇಜ್‌ ತಪಾಸಣೆ ಮಾಡಿದಾ ಗ ಇದು ಬೆಳಕಿಗೆ ಬಂದಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next