Advertisement

ಐರೋಲಿಯ ಶ್ರೀ ದುರ್ಗಾಪರಮೇಶ್ವರಿ ಮಂದಿರದ ವರ್ಧಂತಿ ಉತ್ಸವ

05:07 PM Apr 04, 2017 | Team Udayavani |

ನವಿ ಮುಂಬಯಿ: ನಮ್ಮ ತುಳುನಾಡಿನ ಪ್ರತಿಷ್ಠಿತ ಕಲೆಯಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕಲಿಸಬೇಕಾದ ಅನಿವಾರ್ಯತೆ ಇದೆ. ಈ ಕಲೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದೆ. ಮುಂಬಯಿ ಮಹಾನಗರ 

Advertisement

ಸೇರಿದಂತೆ ನವಿಮುಂಬಯಿ ಪ್ರದೇಶದಲ್ಲಿ ಯಕ್ಷಗಾನಕ್ಕೆ ಉತ್ತಮ ಸಹಕಾರವು ದೊರೆಯುತ್ತದೆ. ಇದು ಮುಂಬಯಿಗರಿಗೆ ಯಕ್ಷಗಾನದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ನ ಅಧ್ಯಕ್ಷ ದಯಾನಂದ ಶೆಟ್ಟಿ ಅವರು ನುಡಿದರು.

ಎ. 2ರಂದು ಐರೋಲಿಯ ಶ್ರೀ ದುರ್ಗಾಪರಮೇಶ್ವರಿ ಮಂದಿರದ 10ನೇ ಪ್ರತಿಷ್ಠಿತ ವರ್ಧಂತಿ ಹಾಗೂ ಪಲ್ಲಕಿ ಉತ್ಸವ ಹಾಗೂ ಶ್ರೀ ಕ್ಷೇತ್ರದ ನೂತನ ಯಕ್ಷಗಾನ ಮಂಡಳಿಯ ಉದ್ಘಾಟನ ಸಮಾರಂಭದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಂದಿರದ ನೂತನ ಯಕ್ಷಗಾನ ಮಂಡಳಿಯು ಭವಿಷ್ಯದಲ್ಲಿ ಉತ್ತಮ ಮಂಡಳಿಯಾಗಿ ರೂಪುಗೊಂಡು  ಕಲಾವಿದರಿಗೆ ತಾಣವಾಗಿ ಕಂಗೊಳಿಸಲಿ ಎಂದರು.

ಇನ್ನೋರ್ವ ಅತಿಥಿಯಾಗಿ ಉಪಸ್ಥಿತರಿದ್ದ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡಿ, ನವಿಮುಂಬಯಿಯಲ್ಲಿ ತುಳು-ಕನ್ನಡಿಗರ ಕಾರ್ಯಚಟುವಟಿಕೆಗಳು ನಿರಂತರವಾಗಿ ಜರಗುತ್ತಿದ್ದು, ಇದು ಇಲ್ಲಿಯ ಕನ್ನಡಿಗರ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಇಲ್ಲಿ ಅನೇಕ ಸಂಘ-ಸಂಸ್ಥೆಗಳು ಸಮಾಜಪರ ಕಾರ್ಯಗಳಲ್ಲಿ ನಿರತವಾಗಿದ್ದು, ಇವರಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ. ಇಂದು ಉದ್ಘಾಟನೆ ಗೊಂಡ ಯಕ್ಷಗಾನ ಮಂಡಳಿಯಿಂದ ಪರಿಸರದಲ್ಲಿ ಕಲೆಯ ಆರಾಧನೆಯು ನಿರಂತರವಾಗಿ ನಡೆಯುತ್ತಿರಲಿ ಎಂದರು.

ಇನ್ನೋರ್ವ ಅತಿಥಿ ಹೆಗ್ಗಡೆ ಸೇವಾ ಸಂಘದ ಮಾಜಿ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಅವರು ಮಾತನಾಡಿ, ದೇವಿಗೆ ಪ್ರೀತಿಯ ಸೇವೆ ಎಂದರೆ ಯಕ್ಷಗಾನ ಶ್ರೀಕ್ಷೇತ್ರದಲ್ಲಿ ಯಕ್ಷಗಾನ

Advertisement

 ಮಂಡಳಿಯನ್ನು ಸ್ಥಾಪಿಸಿ ಕ್ಷೇತ್ರದ  ಕಲೆಯನ್ನು  ಹೆಚ್ಚಿಸಿದೆ. ಮುಂಬಯಿಗರು ಯಕ್ಷಗಾನ ಉಳಿಸಿ-ಬೆಳೆಸುವಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನುಡಿದರು.

ಹಿರಿಯ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನಕ್ಕಿರುವ ಮಹತ್ವ ಇತರ ಮನೋರಂಜನ ಕಾರ್ಯಕ್ರಮಗಳಿಗೆ ಇರುವುದಿಲ್ಲ. ಇದು ನವರಸಗಳಿಂದ ಕೂಡಿದ ಸಂಪೂರ್ಣ ಕಲೆಯಾಗಿದೆ. ಇಂದು ಇಲ್ಲಿ ಉದ್ಘಾಟನೆಗೊಂಡ ಮಂಡಳಿಯಿಂದ ಈ ಕಲೆ ಇನ್ನಷ್ಟು ಬೆಳಗಲಿ ಎಂದರು.

ಸ್ಥಳೀಯ ಉದ್ಯಮಿ ಜಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಶ್ರೀಕ್ಷೇತ್ರದಲ್ಲಿ 
ನಡೆಯುವ ಪ್ರತಿಯೊಂದು ಕಾರ್ಯಗಳಿಗೂ ಐರೋಲಿ ಹೊಟೇಲಿಗರ ಬೆಂಬಲವು ಸದಾಯಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉದ್ಯಮಿ ರಮೇಶ್‌ ಕೋಟ್ಯಾನ್‌, ವಾಸ್ತುತಜ್ಞ ನಂದಕಿಶೋರ್‌ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಆಗಮಿಸಿದ ನವಿಮುಂಬಯಿ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ವಿಜಯ ಚೌಗುಲೆ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಪ್ರಾರಂಭದಲ್ಲಿ ಮಂದಿರದ ಕಾರ್ಯಾಧ್ಯಕ್ಷ ಸದಾಶಿವ ಬಿ. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಕಲಾ ಮಂಡಳಿಗೆ ಚಾಲನೆ ನೀಡಿದರು. ಮಂಡಳಿಯ ಕಾರ್ಯದರ್ಶಿ ಸತೀಶ್‌ ಕೆ. ಶೆಟ್ಟಿ ಅವರು ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್‌ ಸಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಕರುಣಾಕರ ಎಸ್‌. ಶೆಟ್ಟಿ ಪಾಂಗಾಳ, ಜತೆ ಕೋಶಾಧಿಕಾರಿ ಬಾಲಕೃಷ್ಣ ಆರ್‌. ಶೆಟ್ಟಿ, ಯಕ್ಷಗಾನ ಕಲಾವಿದರಾದ ಆನಂದ  ಎಂ. ಶೆಟ್ಟಿ ಇನ್ನ ಹಾಗೂ ಸದಾನಂದ ಶೆಟ್ಟಿ ಮಾನಾಡಿ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶ್ರೀಕ್ಷೇತ್ರದ ಹತ್ತನೇ ವರ್ಧಂತಿ ಉತ್ಸವದ ಸಮಯದಲ್ಲಿ ಯಕ್ಷಗಾನ ಮಂಡಳಿಯ ಉದ್ಘಾಟನೆಯಾಗಿರುವುದು ಉತ್ತಮ ಸಂಕೇತವಾಗಿದ್ದು, ಇದು ಉತ್ತರೋತ್ತರ ಅಭಿವೃದ್ಧಿ ಹೊಂದಲಿ 
– ಮಧುಸೂದನ್‌ ಭಟ್‌ (ಪುರೋಹಿತರು)

ಪರಿಸರದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರಲ್ಲಿ ಶ್ರೀ ಕ್ಷೇತ್ರದ ಕಾರ್ಯ ಅಭಿನಂದನೀಯ. ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಅವರ ಇಷ್ಟ – ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರವನ್ನು ತಾನು ನೀಡುತ್ತೇನೆ 
– ವಿಜಯ ಚೌಗುಲೆ (ವಿರೋಧ ಪಕ್ಷದ ನಾಯಕ : ನವಿಮುಂಬಯಿ ನಗರ ಪಾಲಿಕೆ)

ನಮ್ಮ ಹಲವು ದಿನಗಳ ಕನಸು ಇಂದು ನನಸಾಗಿದೆ. ಯಕ್ಷ ಗಾನವನ್ನು ಉಳಿಸಿ-ಬೆಳೆಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ತಿಳಿಯಪಡಿಸಲು ಶ್ರಮಿಸುತ್ತೇನೆ.  ಯಕ್ಷಗಾನ ಮಂಡಳಿಯ ಯಶಸ್ಸಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ 
– ಹರೀಶ್‌ ಕೆ. ಶೆಟ್ಟಿ ಕಟೀಲು (ಅಧ್ಯಕ್ಷರು : ಶ್ರೀ ಕ್ಷೇತ್ರದ ನೂತನ ಯಕ್ಷಗಾನ ಮಂಡಳಿ)

Advertisement

Udayavani is now on Telegram. Click here to join our channel and stay updated with the latest news.

Next