Advertisement

ಅತಿ ಕಡಿಮೆ ದೂರಕ್ಕೆ ವಿಮಾನಯಾನ

11:00 PM Jul 01, 2019 | mahesh |

ಅಬುಧಾಬಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಎಮಿರೇಟ್ಸ್‌ ವೈಮಾನಿಕ ಸಂಸ್ಥೆಯು ದುಬಾೖ ಮತ್ತು ಮಸ್ಕತ್‌ ಮಧ್ಯೆ ವಿಮಾನಯಾನ ಆರಂಭಿಸಿದ್ದು, ಇದು ವಿಶ್ವದ ಅತ್ಯಂತ ಕಡಿಮೆ ಅವಧಿಯ ವಿಮಾನ ಮಾರ್ಗವಾಗಿದೆ. ಈ ಏರ್‌ಬಸ್‌ ದುಬಾೖ ಮತ್ತು ಮಸ್ಕತ್‌ ಮಧ್ಯೆ 40 ನಿಮಿಷಗಳಲ್ಲಿ ಸಂಚರಿಸುತ್ತದೆ!. ವಿಶೇ ಷ ವೆಂದರೆ, ಈ ಏರ್‌ಬಸ್‌ ಎ380 ವಿಮಾನವನ್ನು ಸ್ವಚ್ಛಗೊಳಿಸಲು ಬೇಕಾಗುವ ಸಮಯ 35 ನಿಮಿಷ.

Advertisement

ಇನ್ನು ದುಬಾೖನಿಂದ ಮಸ್ಕತ್‌ಗೆ ಕೇವಲ 340 ಕಿ.ಮೀ ದೂರವಾಗಿದ್ದು, ಏರ್‌ಬಸ್‌ನಲ್ಲಿ ಅಳವಡಿಸಲಾಗಿರುವ ಕೇಬಲ್‌ನ ಉದ್ದವೇ 500 ಕಿ.ಮೀ ಎಂದು ಎಮಿರೇಟ್ಸ್‌ ಸೋಮ ವಾರ ಟ್ವೀಟ್‌ ಮಾಡಿ ಈ ವಿಮಾನಯಾನ ಮಾರ್ಗದ ವಿಶೇಷಗಳನ್ನು ಪ್ರಕಟಿಸಿದೆ.

ಈ ಸೇವೆಯು ಎಮಿರೇಟ್ಸ್‌ನ ಈ ಹಿಂದಿನ ದಾಖಲೆಯನ್ನೇ ಮೀರಿಸಿದೆ. ಈ ಹಿಂದೆ ಎಮಿರೇಟ್ಸ್‌ ದುಬಾೖನಿಂದ ದೋಹಾಗೆ ಅತಿ ಕಡಿಮೆ ದೂರದ ವಿಮಾನಯಾನ ಆರಂಭಿಸಿತ್ತು. ಅನಂತರ ಉಭಯ ದೇಶಗಳ ಮಧ್ಯದ ಸಂಘರ್ಷದಿಂದ ಇದು ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next