Advertisement

ಸಿಂಗಪುರ-ಬೆಂಗಳೂರು ನಾನ್‌ಸ್ಟಾಪ್‌ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌

12:37 PM Oct 30, 2018 | |

ಏರ್‌ ಇಂಡಿಯಾದ ಅಗ್ಗದ ದರದ ಸಹಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌  ಗಾರ್ಡನ್‌ ಸಿಟಿ ಬೆಂಗಳೂರಿನಿಂದ ಸಿಗಂಪುರಕ್ಕೆ ನಿರಂತರವಾಗಿ ವಿಮಾನ ಯಾನ ಸೇವೆಯನ್ನು ಆರಂಭಿಸಿದೆ.

Advertisement

ಸೋಮವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಆರಂಭವಾಗಿದೆ. ಇದರಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೆಟ್‌ವರ್ಕ್‌ ಇರುವ 18 ನೇ ಸ್ಥಳ ಎನಿಸಿಕೊಂಡಿದೆ. 

ಏರ್‌ ಇಂಡಿಯಾದ ಸಿಎಂಡಿ ಪ್ರದೀಪ್‌ ಕುಮಾರ್‌ ಖರೋಲಾ ಅವರು ಪ್ರಥಮ ಯಾನಿಗೆ ಬೋರ್ಡಿಂಗ್‌ ಕಾರ್ಡ್‌ ನೀಡುವ ಮೂಲಕ ಸೇವೆಗೆ ಚಾಲನೆ ನೀಡಿದರು. ಈ ವೇಳೆ ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಧ್ಯಾಹ್ನ 12.45 ಕ್ಕೆ ಸರಿಯಾಗಿ  ಉದ್ಘಾಟನೆಯ ಬಳಿಕ ಹಾರಾಟ ನಡೆಸಿದ ಕ್ಯಾಪ್ಟನ್‌ ಪ್ರಶಾಂತ್‌ ಕುಮಾರ್‌ ವರ್ಮಾ ಮತ್ತು ಪ್ರಥಮ ಅಧಿಕಾರಿ ಥಾಮಸ್‌ ಕುನ್ನಾಪಲ್ಲಿ  ಅವರಿದ್ದ  ಮೊದಲ ವಿಮಾನ IX 486 ಸ್ಥಳೀಯ ಕಾಲಮಾನ ರಾತ್ರಿ 7.55 ಕ್ಕೆ ಸಿಂಗಪುರ ತಲುಪಿತು. ಸಿಂಗಪುರದಿಂದ ಬೆಂಗಳೂರಿಗ ರಾತ್ರಿ 9.10 ರ ವೇಳೆಗೆ  ಹಾರಾಟ  ಆರಂಭಿಸಿದ IX 485 ವಿಮಾನ ಬೆಂಗಳೂರಿನಲ್ಲಿ 11.15 ಕ್ಕೆ ಇಳಿಯಿತು. 

Advertisement

ಈ ವಿಮಾನಗಳ ಸೇವೆ ವಾರದಲ್ಲಿ ನಾಲ್ಕು ದಿನಗಳ ಕಾಲ ಲಭ್ಯವಿದ್ದು, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಸೇವೆ ಇರಲಿದೆ.

ಏರ್‌ ಇಂಡಿಯಾದ ಅಂಗಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌  ದೇಶದ ಮೊದಲ ಅಗ್ಗದ ದರದ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಎನಿಸಿಕೊಂಡಿದೆ. ದೇಶದ 18 ನಗರಗಳಿಂದ, ಮಧ್ಯಪ್ರಾಚ್ಯ ರಾಷ್ಟ್ರಗಳು, ಆಗ್ನೇಯ ಏಶ್ಯಾ ರಾಷ್ಟ್ರಗಳಿಂದ  ವಾರಕ್ಕೆ 600 ಬಾರಿ ಹಾರಾಟ ನಡೆಸುತ್ತಿದೆ. 24 ಬೋಯಿಂಗ್‌ 737-800 ಎನ್‌ಜಿ ಅತ್ಯಾಧುನಿಕ ವಿಮಾನಗಳ ಮೂಲಕ ಸೇವೆ ಒದಗಿಸುತ್ತಿದೆ. 

ಪ್ರಯಾಣದ ವೇಳೆ ಸ್ವಾದಿಷ್ಟಕರವಾದ ಚಹಾ, ಪಾನೀಯಗಳು ಮತ್ತುಊಟವನ್ನು ವಿಮಾನದಲ್ಲಿ ನೀಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಹೆಚ್ಚುವರಿ ವಿಶೇಷ ಊಟವನ್ನೂ ಆರ್ಡರ್‌ ಮಾಡಲು ಅವಕಾಶವಿದೆ. 

ಆನ್‌ಲೈನ್‌ ಮೂಲಕ ನೆಚ್ಚಿನ ಸೀಟ್‌ಗಳ ಬುಕ್ಕಿಂಗ್‌ ಮತ್ತು ಹೆಚ್ಚುವರಿ ಸರಕು ಸಾಗಾಟಕ್ಕು ವ್ಯವಸ್ಥೆ ಕಲ್ಪಿಸಲಾಗಿದೆ. 

ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ತಾಣಗಳ ಮೂಲಕ facebook.com/AirIndiaExpressOfficial ಪ್ರಯಾಣಿಕರೊಂದಿಗೆ ಅಧಿಕಾರಿಗಳು ಸಂಪರ್ಕ ಸಾಧಿಸಿ ಅಭಿಪ್ರಾಯಗಳನ್ನು ಪಡೆದು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವವ್ಯವಸ್ಥೆಯೂ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next