Advertisement

ಕಾರ್ ನಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಕೆಂದ್ರದ ಚಿಂತನೆ?

08:51 PM Dec 31, 2020 | Team Udayavani |

ನವದೆಹಲಿ: ಕಾರು ಚಾಲಕನ ಪಕ್ಕದ ಸೀಟಿನಲ್ಲಿಯೂ  ಏರ್ ಬ್ಯಾಗ್ ಕಡ್ಡಾಯಗೊಳಿಸಬೇಕು ಎಂಬುದರ ಕುರಿತಾದ ಯೊಜನೆಯನ್ನು  ಕೆಂದ್ರಸರ್ಕಾರ ಕಾರ್ಯರೂಪಕ್ಕೆ ತರಲು ಮುಂದಾಗಿದೆ. ಈ ಯೋಜನೆ  ಅನ್ವಯ ಇನ್ನು ಮುಂದೆ ಮಾರುಕಟ್ಟೆಗೆ ಪ್ರವೇಶಿಸಲಿರುವ ಕಾರಿಗಳ ಮುಂದಿನ ಎರಡು ಸೀಟುಗಳಲ್ಲಿ ಏರ್ ಬ್ಯಾಗ್ ಸೌಲಭ್ಯ ಇರಲಿದೆ.

Advertisement

ಅಪಘಾತಗಳು ನಡೆದ ಸಂದರ್ಭಗಳಲ್ಲಿ ಚಾಲಕನ ಪಕ್ಕದಲ್ಲಿರುವ ವ್ಯಕ್ತಿಗಳು ಹೆಚ್ಚಾಗಿ ಸಾವನಪ್ಪುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಚಿಸಿದೆ. ಈ ಹಿಂದೆ ಕಳೆದ 2019 ರ ಜುಲೈ ತಿಂಗಳಿನಲ್ಲಿಯೇ ಈ ಯೋಜನೆಯನ್ನು ರೂಪಿಸಲಾಗಿದ್ದು, ಸಚಿವ ಸಂಪುಟದಿಂದ ಒಪ್ಪಿಗೆ ದೊರಕುವುದು ಮಾತ್ರ ಬಾಕಿ ಇದೆ.

ಇದನ್ನೂ ಓದಿ:2021ಕ್ಕೆ ಮುನ್ನುಡಿ: ಕೋವಿಡ್ ಕಲಿಸಿದ ಪಾಠಗಳು; ಮುಂಬರುವ ಶಿಕ್ಷಣ ಹೇಗಿರಬೇಕು?

ಎಂದಿನಿಂದ ಈ ನಿಯಮ ಜಾರಿ?

ಈಗಾಗಲೇ ಐಶಾರಾಮಿ ಕಾರುಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮುಂಬರುವ 2021 ರ ಏಪ್ರಿಲ್ ತಿಂಗಳಿನಿಂದ ಎಲ್ಲಾ ಕಾರುಗಳಲ್ಲಿಯೂ ಈ ನಿಯಮವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

Advertisement

ಕಡಿಮೆ ಬೆಲೆಯ ಕಾರು ಉದ್ಯಮಕ್ಕೆ ಹೊಡೆತ

ಈ ನಿಯಮವನ್ನು ಕಡ್ಡಾಯಗೊಳಿಸಿದರೆ ಕಡಿಮೆ ಬೆಲೆಯ ಕಾರುಗಳ ಉತ್ಪಾದನಾ ಕಂಪನಿಗಳಿಗೆ ಹೊಡೆತ ಬೀಳಲಿದ್ದು, ಕಾರುಗಳಲ್ಲಿ ಏರ್ ಬ್ಯಾಗ್ ವ್ಯವಸ್ಥೆಯನ್ನು ರೂಪಿಸಲು ತಗಲುವ ಖರ್ಚಿನ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ಕಾರುಗಳ ಬೆಲೆಯಲ್ಲಿಯೂ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮೇ 4ರಿಂದ CBSC ಪರೀಕ್ಷೆ ಆರಂಭ : ಜುಲೈ 15ಕ್ಕೆ ಫಲಿತಾಂಶ

ಈ ಹಿಂದೆ ಸರ್ಕಾರ ಚಾಲಕನ ಪಕ್ಕದ ಸೀಟಿನಲ್ಲಿ ಕೂರುವವರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next