Advertisement

ಪ್ರಯಾಣಿಕ ಆಸನಕ್ಕೂ ಏರ್‌ಬ್ಯಾಗ್

12:01 AM Dec 19, 2020 | mahesh |

ಹೊಸದಿಲ್ಲಿ: ಇನ್ನು ಮುಂದೆ ಅಗ್ಗದ ಕಾರುಗಳಲ್ಲಿಯೂ ಚಾಲಕನ ಪಕ್ಕದ ಪ್ರಯಾಣಿಕನ ಆಸನಕ್ಕೆ ಏರ್‌ ಬ್ಯಾಗ್‌ ಕಡ್ಡಾಯವಾಗಲಿದೆ.

Advertisement

ವಾಹನಗಳ ಗುಣಮಟ್ಟ ಕುರಿತ ಸರ್ವೋಚ್ಚ ತಂತ್ರಜ್ಞಾನ ಸಮಿತಿಯು ಕೇಂದ್ರ ಸರಕಾರದ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ತಿದ್ದುಪಡಿ ತರುವಂತೆ ಸುರಕ್ಷಾ ವಿಚಾರ ನೋಡಿಕೊಳ್ಳುವ ವಾಹನ ಉದ್ಯಮ ಗುಣಮಟ್ಟ (ಎಐಎಸ್‌)ಗೆ ಸೂಚಿಸಿದೆ.

2019ರ ಜು. 1ರಿಂದಲೇ ಚಾಲಕನ ಆಸನದಲ್ಲಿ ಏರ್‌ ಬ್ಯಾಗ್‌ ಕಡ್ಡಾಯವಾಗಿದೆ. ಕಾರುಗಳ ಸುರಕ್ಷೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಈ ಬಗ್ಗೆ ಸಿದ್ಧತೆ ನಡೆಸಿದ್ದು, ಮುಂದಿನ ವರ್ಷ ಈ ನಿಯಮ ಜಾರಿಗೆ ಬರಲಿದೆ.

ಅಪಘಾತ ಸಂಭವಿಸಿದಾಗ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿರುವವರಿಗೂ ಗಂಭೀರಗಾಯಗಳಾಗುತ್ತವೆ. ಎಷ್ಟೋ ಬಾರಿ ಜೀವಹಾನಿಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಏರ್‌ಬ್ಯಾಗ್‌ ಅಳವಡಿಸುವ ನಿರ್ಧಾರ ತಳೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next