ನವದೆಹಲಿ: ಡ್ನೂಟಿ ಮ್ಯಾನೇಜರ್‌ಗೆ ಹೊಡೆದು ಗದ್ದಲ ಎಬ್ಬಿಸಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧದ ನಿಲುವನ್ನು ಏರ್ ಇಂಡಿಯಾ ಮತ್ತಷ್ಟು ಕಠಿಣ ಗೊಳಿಸಿದೆ. ಬುಧವಾರ ಮುಂಬೈನಿಂದ ದೆಹಲಿಗೆ ಗಾಯ ಕ್ವಾಡ್ ಬುಕ್ ಮಾಡಿದ್ದ 2 ಟಿಕೆಟ್‌ಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ರದ್ದು ಮಾಡಿದೆ. ಮತ್ತೂಂದು ಟಿಕೆಟ್‌ನಲ್ಲಿ ಅವರು ಹೈದರಾಬಾದ್‌ನಿಂದ ದೆಹಲಿಗೆ ಹೋಗಬೇಕಾಗಿತ್ತು. ಎರಡೂ ಟಿಕೆಟ್‌ಗಳು ಗಾಯಕ್ವಾಡ್‌ಗೆ ಹಾರಾಟ ನಿಷೇಧಕ್ಕೂ ಮುನ್ನ ನೀಡಿದ “ಓಪನ್ ಟಿಕೆಟ್’ ಆಗಿತ್ತು. ಅದನ್ನು ಗಾಯಕ್‌ವಾಡ್ ಕಚೇರಿ ಸಿಬ್ಬಂದಿ ಮಂಗಳವಾರ ಕಾದಿರಿಸಿದ್ದರು.
ಈ ನಡುವೆ ಆಂಗ್ಲ ಸುದ್ದಿವಾಹಿನಿಯೊಂದು ಮುಂಬೈ- ನವದೆಹಲಿ ಪ್ರಯಾಣಕ್ಕಾಗಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಬಗ್ಗೆ ಮಾಹಿತಿ ನೀಡಿತ್ತು. ಕೋಚ್ ಎ ನಲ್ಲಿ ಅವರು ಕಾಯ್ದಿರಿಸಿದ್ದ ರಿಸರ್ವೇಷನ್ ಚಾರ್ಟ್ ಅನ್ನು ಪ್ರದರ್ಶಿಸಿತ್ತು. ಆದರೆ ಶಿವಸೇನೆ ಸಂಸದ ರೈಲಲ್ಲಿ ಪ್ರಯಾಣಿ ಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಮಾರ್ಗ ಮಧ್ಯ ಅವರು ರೈಲು ಹತ್ತಬಹುದೆಂದ ಸಂಶಯ ಉಂಟಾಗಿದೆ. ಗಾಯಕ್ವಾಡ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.