Advertisement

ನಗರದ ಐದು ಕಡೆಗಳಲ್ಲಿ ವಾಯು ಗುಣಮಟ್ಟ ಮಾಪನ ಟವರ್‌

11:11 PM Jan 20, 2020 | mahesh |

ಮಹಾನಗರ: ಧೂಳಿನ ಕಣಗಳ ಸಾಂದ್ರತೆಯ ಹೆಚ್ಚಳದಿಂದ ಉಂಟಾಗುತ್ತಿರುವ ವಾಯು ಮಾಲಿನ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ತಪಾಸಣೆ ನಡೆಸುವ ಉದ್ದೇಶದಿಂದ ನಗರದ ಐದು ಕಡೆಗಳಲ್ಲಿ ವಾಯುಗುಣಮಟ್ಟ ಮಾಪನ ಟವರ್‌ ತಲೆ ಎತ್ತಲಿವೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿ ನಗರದ ಜ್ಯೋತಿ ವೃತ್ತ ಬಳಿ, ಮಹಾನಗರ ಪಾಲಿಕೆ ಕಟ್ಟಡ, ಪುರಭವನ, ಬೋಳಾರ್‌, ಬೆಸೆಂಟ್‌ ಶಾಲೆಯಲ್ಲಿ ಸದ್ಯ ಟವರ್‌ ಅನುಷ್ಠಾನವಾಗಿದ್ದು, ಸದ್ಯದಲ್ಲಿಯೇ ಕಾರ್ಯಾಚರಿಸಲಿದೆ. ಟವರ್‌ನ ನಿರ್ವಹಣೆಗೆಂದು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಕಂಟ್ರೋಲ್‌ ರೂಂ. ಸಿದ್ಧವಾಗಿದೆ.

ನಗರದಲ್ಲಿ ಅಳವಡಿಸಿದ ಟವರ್‌ನ ಸುತ್ತಮುತ್ತಲಿನ ಪ್ರದೇಶದ ಧೂಳಿನ ಕಣಗಳ ಆಧಾರದಲ್ಲಿ ಕಮಾಂಡ್‌ ಸೆಂಟರ್‌ನಲ್ಲಿ ವಾಯುಮಾಲಿನ್ಯ ಗುಣಮಟ್ಟದ ಅಂಕಿ ಅಂಶ ರವಾನೆಯಾಗುತ್ತದೆ. ಈ ಅಂಕಿ ಅಂಶವನ್ನು ಮುಂದಿನ ದಿನಗಳಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಡಿಸ್ಪೆ ಮುಖೇ ನವೂ ಅಳವಡಿಸುವ ಕಾರ್ಯ ನಡೆಯಲಿದೆ.  ಸದ್ಯ ಕದ್ರಿ ಪಾರ್ಕ್‌ ಬಳಿಯ ಸಕೂ ಟ್‌ಹೌಸ್‌ ಆವರಣ ದಲ್ಲಿ ವಾಯು ಗುಣ ಮಟ್ಟ ಮಾಪನ ಕೇಂದ್ರ ಇದೆ. ಇಲ್ಲಿಂದ ಸುತ್ತಮುತ್ತಲಿನ ಸುಮಾರು 1.5 ಕಿ.ಮೀ. ವ್ಯಾಪ್ತಿಯಲ್ಲಿ ಗಾಳಿಯ ಸಾಂಧ್ರತೆಗೆ ಅನುಗುಣವಾಗಿ ಪ್ರತೀ ದಿನ ರೀಡಿಂಗ್‌ ಮಾಡಲಾಗುತ್ತಿದೆ. ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ ಎಂಬಂತೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿವೆ.

ನಗರದಲ್ಲಿ ವರ್ಷಕ್ಕೆ 37,000 ದಷ್ಟು ವಾಹನಗಳು ರಸ್ತೆಗಿಳಿಯುತ್ತಿವೆ. ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ ವರ್ಷಕ್ಕೆ ಸುಮಾರು 27 ಸಾವಿರಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳು ಮಂಗಳೂರು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗುತ್ತಿವೆ. ಒಂದು ಸಾವಿರದಷ್ಟು ಮೂರು ಚಕ್ರದ ವಾಹನ, 8 ಸಾವಿರ ಲಘು ವಾಹನ, ಒಂದು ಸಾವಿರ ಲಘು ಸರಕು ವಾಹನಗಳು ನೋಂದಣಿಯಾಗುತ್ತಿವೆ. ಇದು ಕೂಡ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಬಹುದು.

ಮಾಪನ ಕೇಂದ್ರದ ಪ್ರಸ್ತಾವ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದಲ್ಲಿ ವಾಯುಗುಣಮಟ್ಟ ಮಾಪನ ಟವರ್‌ ಸ್ಥಾಪನೆಯಾಗಲಿದ್ದು, ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2018-19ನೇ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರು. ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ 96 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಉಲ್ಲೇಖೀಸಿದ್ದರು. ಮಂಗಳೂರಿನಲ್ಲಿ ಸುಮಾರು 2.3 ಕೋಟಿ ರೂ. ವೆಚ್ಚದಲ್ಲಿ ವಾಯುಗುಣಮಟ್ಟ ಮಾಪನ ಕೇಂದ್ರ ಸದ್ಯದಲ್ಲೇ ಸ್ಥಾಪನೆಯಾಗಲಿದೆ.

Advertisement

ಅನುಷ್ಠಾನಕ್ಕೆ 20 ಲಕ್ಷ ರೂ. ವ್ಯಯ
ಸ್ಮಾರ್ಟ್‌ಸಿಟಿ ಯೋಜನೆಯ ಮುಖೇನ ನಗರದ ಐದು ಕಡೆಗಳಲ್ಲಿ ತಲೆಎತ್ತಿರುವ ವಾಯುಗುಣಮಟ್ಟ ಮಾಪನ ಟವರ್‌ ಅನುಷ್ಠಾನಕ್ಕೆ ಸುಮಾರು 20 ಲಕ್ಷ ರೂ. ವ್ಯಯಿಸಲಾಗಿದೆ. ಮೊದಲ ಹಂತದಲ್ಲಿ ಐದು ಟವರ್‌ ಮತ್ತು ಎರಡನೇ ಹಂತದಲ್ಲಿ ನಗರದ ಇತರೇ ಪ್ರದೇಶಗಳಲ್ಲಿಯೂ ಮತ್ತೆ ಐದು ಟವರ್‌ ಅಳವಡಿಸಲಾಗುತ್ತಿದೆ.

ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸದ್ಯ ನಗರದ 5 ಕಡೆಗಳಲ್ಲಿ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯಾಗಲಿವೆ. ನಗರದಲ್ಲಿ ವಾಯುಗುಣ ಮಟ್ಟ ಯಾವ ಪ್ರಮಾಣದಲ್ಲಿದೆ ಎಂಬುವುದರ ಬಗ್ಗೆ ಇದರಿಂದ ತಿಳಿಯಲು ಸಾಧ್ಯ. ಅಲ್ಲದೆ ರಾಜ್ಯ ಸರಕಾರದಿಂದ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯಾಗಲಿದೆ.
 - ಜಯಪ್ರಕಾಶ್‌ ನಾಯಕ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

 ನವೀನ್‌ ಭ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next