Advertisement

ವಾಯು ಮಾಲಿನ್ಯ ನಿಯಂತ್ರಣ ಕಠಿನ ಕ್ರಮ ಅಗತ್ಯ

10:00 AM Oct 22, 2019 | Sriram |

ಜಗತ್ತನ್ನು ವಾಯು ಮಾಲಿನ್ಯ ಅತಿಯಾಗಿ ಕಾಡುತ್ತಿದೆ. ಎಚ್‌ಐವಿ ಮತ್ತು ಮಲೇರಿಯಾ ರೋಗಕ್ಕಿಂತಲೂ ವಾಯು ಮಾಲಿನ್ಯ ಬಹುದೊಡ್ಡ ಅಪಾಯ ಎಂದು ವಿಶ್ವ ಸಂಸ್ಥೆ ಹೇಳಿದೆ. ಜಗತ್ತಿನ ಹಲವು ರಾಷ್ಟ್ರಗಳು ವಾಯು ಮಾಲಿನ್ಯದ ವಿರುದ್ಧ ಸಮರ ಸಾರಿದ್ಧು, ಭಾರತ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾಗೃತಗೊಂಡಿಲ್ಲ. ಇದನ್ನು ಕಡಿಮೆ ಮಾಡಲು ಸರಕಾರಗಳು, ಸರಕಾರೇತರ ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೋರ್ವರ ಮೇಲೆ ಸಮಾನ ಜವಾಬ್ದಾರಿ ಇದೆ. ವಿದೇಶಗಳಲ್ಲಿ ಇದನ್ನು ನಿಯಂತ್ರಿಸಲು ಹಲವು ಉಪಕ್ರಮಗಳು ಜಾರಿಯಲ್ಲಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

Advertisement

5.50 ಲಕ್ಷ
ಜಗತ್ತಿನಲ್ಲಿ ಪ್ರತಿ ವರ್ಷ ವಾಯು ಮಾಲಿನ್ಯದಿಂದ 5.50 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಚೀನದಲ್ಲಿ ಹೇಗೆ?
ಚೀನ ತನ್ನ “ಏರ್‌ ಪ್ಯೂರಿಫೈಯಿಂಗ್‌’ ಗೋಪುರ ನಿರ್ಮಿಸಿದೆ. ಇದು ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಮಾಲಿನ್ಯವನ್ನು ಸಂಗ್ರಹಿಸಿ, ಗುಣಮಟ್ಟದ ವಾಯು ವನ್ನು ಪರಿಸರಕ್ಕೆ ಹರಿಯಬಿಡಲು ನೆರವಾಗುತ್ತದೆ. ಸೌರ ಮತ್ತು ಪವನ ಶಕ್ತಿಯನ್ನು ಹೆಚ್ಚಾಗಿ ಜನರು ಅವ ಲಂಬಿಸಿದ್ದಾರೆ. ಈಗಾಗಲೇ 103 ಕಲ್ಲಿದ್ದಲು ಸುಡುವ ಕಾರ್ಖಾಗಳಿಗೆ ಬೀಗ ಜಡಿಯಲಾಗಿದೆ. ಮೊಬೈಲ್‌ ಆ್ಯಪ್‌ ಮೂಲಕ ಗಾಳಿಯ ಗುಣ ಮಟ್ಟವನ್ನು ಅಳೆಯಲಾಗುತ್ತದೆ.

ನಾರ್ವೆ: ಎಲೆಕ್ಟ್ರಿಕ್‌ ವಾಹನ
ನಾರ್ವೆ ದೇಶ ಇಂಧನ ಚಾಲಿತ ವಾಹನಗಳಿಗೆ ಪೂರ್ಣವಿರಾಮ ಹಾಕಿದೆ. ಜನರು ವಿದ್ಯುತ್‌ ಅಥವಾ ಬ್ಯಾಟರಿ ಚಾಲಿತ ವಾಹನಗಳನ್ನು ಕೊಂಡುಕೊಳ್ಳಲು ಪ್ರೋತ್ಸಾಹಿ ಸುತ್ತಿದ್ದಾರೆ. ವಿದ್ಯುತ್‌ ಚಾಲಿತ ಬಸ್‌ಗಳಿಗೆ ಟೋಲ್‌ ವಿನಾಯಿತಿ, ವಾಹನಗಳಿಗೆ ಟ್ಯಾಕ್ಸ್‌ ವಿನಾಯಿ ಕಲ್ಪಿಸಲಾಗುತ್ತಿದೆ. 2015ರ ಬಳಿಕ ನಾರ್ವೆಯಲ್ಲಿ ಕೇವಲ ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಯಲ್ಲಿ ಇವೆ.

ಜಪಾನ್‌: ರೈಲಲ್ಲೇ ಓಡಾಟ
ಜಪಾನ್‌ ರೈಲು ಸೇವೆಗೆ ಹೆಚ್ಚು ಆದ್ಯತೆ ನೀಡಿದೆ. ಪ್ರಮುಖ 4 ದ್ವೀಪಗಳಾದ ಹೊನ್ಯು, ಹಕಾಯೊx, ಕ್ಯುಶು, ಶಿಕೋಕುನಲ್ಲಿ ಬಹುತೇಕ ರೈಲು ಪ್ರಯಾಣವೇ ಹೆಚ್ಚಾಗಿದೆ. ಪ್ರತಿ ನಗರವನ್ನು, ಸಣ್ಣ ಪಟ್ಟಣವನ್ನು ರೈಲುಗಳ ಮೂಲಕವೇ ಅಲ್ಲಿನ ಜನ ಸಂಪರ್ಕಿಸುತ್ತಾರೆ. ಜಪಾನ್‌ನಲ್ಲಿ ಶೇ. 72 ರೈಲು ಬಳಕೆಯಾದರೆ ಶೇ. 13 ಮಾತ್ರ ಮೋಟಾರ್‌ ವಾಹನ ಬಳಸಲಾಗುತ್ತಿದೆ. ಅಗ್ಗದ ರೈಲು ಸೇವೆ ನೀಡುವ 4ನೇ ರಾಷ್ಟ್ರ ಜಪಾನ್‌.

Advertisement

ಸ್ವೀಡನ್‌: ತೆರಿಗೆ ವಿನಾಯಿತಿ
ಸ್ವೀಡನ್‌ನಲ್ಲಿ ಕಾರ್ಖಾನೆ ನಿರ್ಮಿಸಲು ಅತ್ಯಂತ ಕಠಿನ ನಿಯಮ ಗಳನ್ನು ಜಾರಿಗೆ ತರಲಾಗಿದೆ. ವಿದ್ಯುತ್‌ ಶಕ್ತಿಯನ್ನು ಬಳಸಿ ಫ್ಯಾಕ್ಟರಿ ತೆರೆಯುವವರಿಗೆ ಕಡಿಮೆ ಟ್ಯಾಕ್ಸ್‌ ಇದ್ದು, ಇಂಧನ ಆಧರಿಸಿದ ಫ್ಯಾಕ್ಟರಿಗೆ ಹೆಚ್ಚು ಟ್ಯಾಕ್ಸ್‌ ವಿಧಿಸಲಾಗುತ್ತದೆ.

ಸಿಂಗಾಪುರ: ತಾಂತ್ರಿಕ ಕ್ರಮ
ಸಿಂಗಾಪುರದಲ್ಲಿ ಕಾರ್ಖಾನೆಗಳಿಂದ ಹೊರಹೋಗುವ ವಾಯು ಹೆಚ್ಚು ಕಲುಷಿತಗೊಂಡಿದ್ದರೆ ಅದರ ಪ್ರಮಾಣವನ್ನು ಶೇ. 90ಕ್ಕೆ ಇಳಿಸುವ ತಂತ್ರಜ್ಞಾನವನ್ನು ಜಾರಿಗೊಳಿಸಲಾಗಿದೆ.

ಇಟಲಿ: ದಂಡವೇ ಅಸ್ತ್ರ
ಇಟಲಿಯಲ್ಲಿ 10 ವರ್ಷಗಳಲ್ಲಿ ತ್ಯಾಜ್ಯ ಸುಡುವುದರಿಂದ ವಾಯು ಮಾಲಿನ್ಯ ಶೇ.35ರಿಂದ 80ರಷ್ಟು ಹೆಚ್ಚಾಗಿತ್ತು. ಇದನ್ನು ತಡೆ ಗಟ್ಟಲು ಅಲ್ಲಿನ ಸರಕಾರ ಕಠಿನ ನಿಯಮವನ್ನು ಜಾರಿಗೊಳಿಸಿದ್ದು, ಉಲ್ಲಂ ಸಿದರೆ ದಂಡ ತೆರಬೇಕು.

ಬ್ರೆಜಿಲ್‌: ಉಪಕ್ರಮ
ಬ್ರೆಜಿಲ್‌ನಲ್ಲಿ ನೈಸರ್ಗಿಕ ಶಕ್ತಿಗಳನ್ನು ಬಳಸಿ ಫ್ಯಾಕ್ಟರಿಗಳನ್ನು ನಡೆಸು ವುದಾದರೆ ಅವುಗಳಿಗೆ ಉತ್ತೇಜನ ನೀಡಲಾಗುತ್ತದೆ. ಪವನ, ಸೌರಶಕ್ತಿ ಮತ್ತು ಸಣ್ಣ ಪ್ರಮಾಣದ ಹೈಡ್ರೋ ಶಕ್ತಿಯನ್ನು ತಯಾರಿಸಲು ಮುಂದೆ ಬಂದರೆ ಅವರಿಗೆ ಉತ್ತೇಜನ ನೀಡಲಾಗುತ್ತದೆ.

ನಾವೇನು ಮಾಡಬಹುದು?
-  ಟ್ರಾಫಿಕ್‌ನಲ್ಲಿ ವಾಹನಗಳ ಎಂಜಿನ್‌ ಆಫ್ ಮಾಡಿ
-  ಸೈಕಲ್‌ ಬಳಕೆ
-  ಸಾರ್ವಜನಿಕ ಸಂಪರ್ಕ ಸೇವೆ
-  ಸಿಎನ್‌ಜಿ ವಾಹನಗಳ ಬಳಕೆ
-  ಹೆಚ್ಚು ಮೈಲೇಜ್‌ ನೀಡುವ ವಾಹನಗಳ ಓಡಾಟ
-  ಸರಕು ಸಾಗಣೆಗೆ ಟ್ರಕ್‌ ಬಳಕೆ
-  ಒಳ್ಳೆಯ ರಸ್ತೆ ನಿರ್ಮಾಣ
-  ಹಂಚಿಕೊಂಡು ಟ್ಯಾಕ್ಸಿ ಪ್ರಯಾಣ
-  ತ್ಯಾಜ್ಯವನ್ನು ಬೆಂಕಿಯಿಂದ ದೂರ ಇಡಿ

ವಾಯು ಮಾಲಿನ್ಯದ ದುಷ್ಪರಿಣಾಮಗಳು
- ಅಸ್ತಮಾ, ಉಸಿರಾಟದ ಸಮಸ್ಯೆ
- ಟಿಬಿ, ಶ್ವಾಸಕೋಶದಲ್ಲಿ ಸಮಸ್ಯೆ
- ಆರೋಗ್ಯದಲ್ಲಿ ಏರಿಳಿತ
- ಚರ್ಮ ಅಲರ್ಜಿ
- ಕಣ್ಣಿನ ದೃಷ್ಟಿ ಸಮಸ್ಯೆ
- ಕ್ಯಾನ್ಸರ್‌
- ಹವಾಮಾನದ ಮೇಲೆ ಹಾನಿ
- ಗ್ಲೋಬಲ್‌ ವಾರ್ಮಿಂಗ್‌
- ಜೀವಿತಾವಧಿ ಕುಸಿತ

ಭಾರತದಲ್ಲಿ ಎಲ್ಲೆಲ್ಲಿ ಹೆಚ್ಚು
ನಗರಗಳು ಪಿಎಂ 2.5 ಮಟ್ಟ
ಹೊಸದಿಲ್ಲಿ 153
ಪಾಟ್ನಾ 149
ಗ್ವಾಲಿಯರ್‌ 144
ರಾಯ್‌ಪುರ್‌ 134
ಅಹ್ಮದಾಬಾದ್‌ 100
ಲಕ್ನೋ 96
ಫಿರೋಜ್‌ಬಾದ್‌ 96
ಕಾನ್ಪುರ 93
ಅಮೃತಸರ 92
ಆಗ್ರಾ 88

Advertisement

Udayavani is now on Telegram. Click here to join our channel and stay updated with the latest news.

Next