Advertisement

ವಾಯುಪಡೆ ತರಬೇತಿ ಕೇಂದ್ರಕ್ಕೆ ಏರ್‌ ಮಾರ್ಷಲ್‌ ಭೇಟಿ

12:22 PM Nov 06, 2019 | Suhan S |

ಬೆಳಗಾವಿ: ಭಾರತೀಯ ವಾಯು ಸೇನೆಯ ಏರ್‌ ಮಾರ್ಷಲ್‌ ಎ.ಎಸ್‌.ಬುಟೋಲಾ ಸಾಂಬ್ರಾದಲ್ಲಿರುವ ಭಾರತೀಯ ವಾಯುಪಡೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಆಲ್ಲಿನ ತರಬೇತಿ ಚಟುವಟಿಕೆಗಳನ್ನು ಪರಿಶೀಲಿಸಿದರು.

Advertisement

ಏರ್‌ ಮಾರ್ಷಲ್‌ ಅವರನ್ನು ಸ್ವಾಗತಿಸಿದ ಏರಮನ್‌ ತರಬೇತಿ ಶಾಲೆಯ ಏರ್‌ ಕಮಾಂಡರ್‌ ಆರ್‌ ರವಿಶಂಕರ್‌ ತರಬೇತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ತರಬೇತಿಯ ವಿವಿಧ ಹಂತದ ಚಟುವಟಿಕೆಗಳನ್ನು ವೀಕ್ಷಿಸಿದ ಏರ್‌ ಮಾರ್ಷಲ್‌ ಅವರು ತರಬೇತಿದಾರರ ಜೊತೆ ಸಂವಾದ ನಡೆಸಿದರು. ನಂತರ ಮಾತನಾಡಿದ ಏರ್‌ ಮಾರ್ಷಲ್‌ ಎ.ಎಸ್‌. ಬುಟೋಲಾ ಅವರು, ಏರ್‌ಮನ್‌ಗಳು ಭಾರತೀಯ ವಾಯುಪಡೆಯ ಭವಿಷ್ಯವಾಗಿರುವುದರಿಂದ ಅವರಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡುವ ಮತ್ತು ಅದನ್ನು ನಿರ್ವಹಿಸುವ ಅಗತ್ಯವಿದೆ. ತರಬೇತಿದಾರರು ಈ ಅವಧಿಯಲ್ಲಿ ಉನ್ನತ ತಂತ್ರಜ್ಞಾನದ ಜ್ಞಾನ ಪಡೆದುಕೊಳ್ಳಬೇಕು ಎಂದರು.  ಏರ್‌ ಮಾರ್ಷಲ್‌ ಅವರ ಪತ್ನಿ ಮೋನಿಕಾ ಬುಟೋಲಾ ಹಾಗೂ ವಾಯುಪಡೆ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next