Advertisement

ಲಲನೆಯರಿಗೊಪ್ಪುವ ಏರ್‌ಲೂಂ ದಿರಿಸುಗಳು!

02:30 PM Jun 17, 2017 | Team Udayavani |

“ಅನಘ’ ಮತ್ತು “ನಾವಿಕ’ ಹ್ಯಾಂಡ್‌ಲೂಮ್‌ಗಳು ತಮ್ಮ ವೈವಿಧ್ಯಮಯ ಸಂಗ್ರಹದ ಪ್ರದರ್ಶನ ಮತ್ತು ಮಾರಾಟ ಮೇಳ “ಏರ್‌ಲೂಂ’ಅನ್ನು ಆಯೋಜಿಸಿದೆ. ಈ ಮೇಳದ ವೈಶಿಷ್ಟéವೆಂದರೆ ಇಲ್ಲಿ ಪ್ರದರ್ಶನ ಕಾಣುತ್ತಿರುವ ದಿರಿಸುಗಳನ್ನು ಮಧ್ಯವಯಸ್ಸಿನ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ತಯಾರಿಸಿರುವುದು. ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಸೌಂದರ್ಯ ಪ್ರಜ್ಞೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವ ಅಪವಾದದಿಂದ ಅವರನ್ನು ಕಾಪಾಡುವುದು ಈ ಮೇಳದ ಉದ್ದೇಶ ಎನ್ನುತ್ತಾರೆ ಸಂಘಟಕರು. ಈ ಪ್ರದರ್ಶನದಲ್ಲಿ ಹ್ಯಾಂಡ್‌ಲೂಮ ಸೀರೆಗಳು, ಟಾಪ್‌ಗ್ಳು, ಸಿಗರೇಟ್‌ ಸ್ಟೈಲ್‌ 
ಪ್ಯಾಂಟ್‌ಗಳು, ಟ್ಯೂನಿಕ್ಸ್‌ಗಳನ್ನು ನೋಡಬಹುದು. ಬೆಂಗಳೂರಿನ ಪಾರಂಪರಿಕ ಹ್ಯಾಂಡ್‌ಲೂಮ್‌ 
ಉತ್ಪನ್ನಗಳು ಹೊಸತನವನ್ನು ಮೈಗೂಡಿಸಿಕೊಂಡು ಹೊಸ ತಲೆಮಾರಿನ ಮಹಿಳೆಯರ ಫ್ಯಾಷನ್ನಿಗನುಗುಣವಾಗಿ ಬೇಡಿಕೆ ಪೂರೈಸಲಿದೆ. 16 ಬಗೆಯ ಪ್ರೀ-ಶ್ರಿಂಕ್‌ ಶೈಲಿಯ ಡ್ರೆಸ್‌ಗಳು ಮೇಳದಲ್ಲಿ ಲಭ್ಯ. 

Advertisement

ಎಲ್ಲಿ?: “ರೈನ್‌ ಟ್ರೀ’ ಲೈಫ್ಸ್ಟೈಲ್‌, ಐಟಿಸಿ ವಿಂಡ್ಸರ್‌ ಹೋಟೆಲ್‌ ಎದುರು, ಸ್ಯಾಂಕಿ ರೋಡ್‌, ವಸಂತನಗರ
ಯಾವಾಗ?: ಜೂನ್‌ 17, ಬೆಳಿಗ್ಗೆ 11- ಸಂಜೆ 7

Advertisement

Udayavani is now on Telegram. Click here to join our channel and stay updated with the latest news.

Next