Advertisement

ಏರಿಂಡಿಯಾ ಪ್ರಯಾಣಿಕ ಆದಾಯದಲ್ಲಿ ಶೇ.20ರಷ್ಟು ಏರಿಕೆ

12:04 PM Jan 12, 2019 | |

ಹೊಸದಿಲ್ಲಿ : 48,000 ಕೋಟಿ ರೂ.ಗಳಿಗೂ ಮೀರಿದ ಸಾಲದ ಹೊರೆಗೆ ನಲುಗುತ್ತಿರುವ ಸರಕಾರಿ ಒಡೆತನದ ಏರಿಂಡಿಯಾ ವಾಯುಯಾನ ಸಂಸ್ಥೆಯ ಪ್ರಯಾಣಿಕರಿಂದ ಬರುವ ಆದಾಯವು 2018-19ರ ಮೂರನೇ ತ್ತೈಮಾಸಿಕದಲ್ಲಿ ಶೇ.20ರಷ್ಟು ಏರಿದೆ. 

Advertisement

ಹಾಗಿದ್ದರೂ ಏರಿಂಡಿಯಾ ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆ ಈ ಅವಧಿಯಲ್ಲಿ  ಕೇವಲ ಶೇ.4ರಷ್ಟು ಏರಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಏರಿಂಡಿಯಾ ಶೇರು ಮಾರಾಟ ಪ್ರಸ್ತಾವ ಟೇಕಾಫ್ ಆಗಿರಲಿಲ್ಲ. 

ವರ್ಷ ಹಿಂದಿನ ಇದೇ ಮೂರನೇ ತ್ತೈಮಾಸಿಕದಲ್ಲಿ ಏರಿಂಡಿಯಾ ಪ್ರಯಾಣಿಕರ ಸಂಖ್ಯೆ 53.28 ಲಕ್ಷ ಇತ್ತು. ಈ ಬಾರಿಯ ತ್ತೈಮಾಸಿಕದಲ್ಲಿ ಅದು 55.27 ಲಕ್ಷಕ್ಕೇರಿದೆ ಎಂದು ಅಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next