ಹೊಸದಿಲ್ಲಿ : ವಿಶ್ವದ ಮೂರನೇ ಅತ್ಯಂತ ಕಳಪೆ ವಿಮಾನಯಾನ ಸೇವೆ ಎಂಬ ಟೀಕೆಗೆ ಗುರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾ ಶೀಘ್ರದಲ್ಲೇ ಮುಂದಿನ ಸಾಲಿನಲ್ಲಿ 6 ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲು ಮುಂದಾಗಿದೆ.
‘ಶೀಘ್ರದಲ್ಲಿ ನಾವು ಮಹಿಳೆಯರಿಗೆ 6 ಸೀಟುಗಳನ್ನು ಮೀಸಲಿಡಲಿದ್ದೇವೆ.ಇದಕ್ಕೆ ಯಾವುದೇ ಇತರೆ ದರವನ್ನು ಹೇರುವುದಿಲ್ಲ’ ಎಂದು ಏರ್‌ಇಂಡಿಯಾ ಅಧ್ಯಕ್ಷ ಮತ್ತು ಎಂಡಿ ಅಶ್ವನಿ ಲೋಹಾನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಏರ್‌ಇಂಡಿಯಾ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಆರಾಮದಾಯಕ ಪ್ರಯಾಣ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಫ್ಲೈಟ್‌ಸ್ಟಾಟ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಏರ್‌ಇಂಡಿಯಾ ವಿಶ್ವದ ಮೂರನೇ ಅತ್ಯಂತ ಕಳಪೆ ವಿಮಾನಯಾನ ಸೇವೆ ಎಂಬ ಅಂಶವಿತ್ತು.