ನವದೆಹಲಿ: ಇಸ್ರೇಲ್ ಮತ್ತು ಉಗ್ರಗಾಮಿ ಗುಂಪು ಹಮಾಸ್ ನಡುವಿನ ಉದ್ವಿಗ್ನತೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಪರಿಣಾಮ ಏರ್ ಇಂಡಿಯಾ ನವೆಂಬರ್ 30 ರವರೆಗೆ ಟೆಲ್ ಅವೀವ್‌ಗೆ ವಿಮಾನ ಹಾರಾಟವನ್ನು ಸ್ಥಗಿತಗಳೊಸಿದೆ.
ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿದಾಗಿನಿಂದ ಏರ್ ಇಂಡಿಯಾ ವಿಮಾನ ತನ್ನ ಹಾರಾಟವನ್ನು ಸ್ಥಗಿತಗೊಳಿಸಿತ್ತು.
ಸಂಘರ್ಷದ ಹಿನ್ನೆಲೆಯಲ್ಲಿ ನವೆಂಬರ್ 30 ರವರೆಗೆ ಟೆಲ್ ಅವಿವ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಿಂದ ಟೆಲ್ ಅವಿವ್‌ಗೆ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸೇರಿ ಐದು ದಿನಗಳು ವಿಮಾನ ಹಾರಾಟ ನಡೆಸುತ್ತಿತ್ತು ಹಮಾಸ್ ಇಸ್ರೇಲ್ ಘರ್ಷಣೆ ಆರಂಭವಾದಾಗಿನಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು ಈ ನಡುವೆ ಕಳೆದ ತಿಂಗಳು, ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ ಹಿಂತಿರುಗಲು ಇಚ್ಛಿಸುವ ಭಾರತೀಯರನ್ನು ಮರಳಿ ಕರೆತರಲು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ವಿಮಾನಯಾನವು ರಾಷ್ಟ್ರೀಯ ರಾಜಧಾನಿಯಿಂದ ಟೆಲ್ ಅವೀವ್‌ಗೆ ಕೆಲವು ಚಾರ್ಟರ್ಡ್ ವಿಮಾನಗಳನ್ನು ನಿರ್ವಹಿಸಿತು.
ಇದನ್ನೂ ಓದಿ: Mahadev App Case: ಬಿಜೆಪಿ ನನ್ನ ಮಾನಹಾನಿ ಮಾಡಲು ಯತ್ನಿಸುತ್ತಿದೆ… ಭೂಪೇಶ್ ಬಘೇಲ್ ಆರೋಪ