Advertisement

ಏರ್‌ ಇಂಡಿಯಾಕ್ಕೆ ಆರು ತಾಸು ಕಾದು ವಾಪಸಾದ ಪ್ರಯಾಣಿಕರು!

12:28 PM Apr 03, 2019 | Vishnu Das |

ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಸಂಚರಿಸಬೇಕಾಗಿದ್ದ ಏರ್‌ ಇಂಡಿಯಾದ ವಿಮಾನವು ತಾಂತ್ರಿಕ ಕಾರಣಕ್ಕೆ ರದ್ದುಗೊಂಡ ಪರಿಣಾಮ, ಪ್ರಯಾಣಿಕರು ಸುಮಾರು ಆರು ತಾಸು ನಿಲ್ದಾಣದಲ್ಲಿಯೇ ಕಾದು ಕುಳಿತು ಅನಂತರ ಪ್ರಯಾಣ ಸಾಧ್ಯವಾಗದೆ ಹೊಟೇಲ್‌ಗೆಮರಳಿದ ಘಟನೆ ಮಂಗಳವಾರ ನಡೆದಿದೆ.

Advertisement

ಈ ವಿಮಾನವು ಮಂಗಳವಾರ ಮಧ್ಯಾಹ್ನ 12.40ಕ್ಕೆ ಮುಂಬಯಿಗೆ ಪ್ರಯಾಣಿಸಬೇಕಾಗಿತ್ತು. ಆದರೆ ವಿಮಾನ ದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾರಾಟವನ್ನು ಮುಂದೂಡಲಾಗಿತ್ತು. ಆದರೆ, ವಿಮಾನವು ವಿಳಂಬವಾಗಿರುವ ಬಗ್ಗೆ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಇದರಿಂದ 100ಕ್ಕೂ ಅಧಿಕ ಪ್ರಯಾಣಿಕರು ತೊಂದರೆ ಅನುಭವಿಸಿದರು. ಅವರಲ್ಲಿ ಕೆಲವರು ಮುಂಬಯಿಯಿಂದ ನೇರವಾಗಿ ಬೇರೆ ದೇಶಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರು ಕೂಡ ಇದ್ದರು. ಇದೀಗ ವಿಮಾನ ರದ್ದಾದ ಕಾರಣ ಅವರಿಗೆ ನೇರ ಸಂಪರ್ಕದ ವಿಮಾನವೂ ಕೈತಪ್ಪಿ ಹೋಗಿದೆ.

ಈ ನಡುವೆ, ಮಧ್ಯಾಹ್ನದ ವೇಳೆಗೆ ಬದಲಿ ವ್ಯವಸ್ಥೆ ಮಾಡುವುದಾಗಿ ಏರ್‌ ಇಂಡಿಯಾದವರು ಭರವಸೆ ನೀಡಿದ್ದರು. ಆದರೆ, ಸಂಜೆ 6 ಗಂಟೆ ಆದರೂ ಮುಂಬಯಿಗೆ ಬದಲಿ ವಿಮಾನದ ವ್ಯವಸ್ಥೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಆರು ತಾಸು ತೊಂದರೆ ಅನುಭವಿಸಿದರು ಅಂತಿಮವಾಗಿ ಏರ್‌ ಇಂಡಿಯಾವು ದಿನದ ಮಟ್ಟಿಗೆ ಪ್ರಯಾಣವನ್ನೇ ರದ್ದುಗೊಳಿಸಿತು. ಹೀಗಾಗಿ ಎಲ್ಲ ಪ್ರಯಾಣಿಕರಿಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ರೂಂ ಮಾಡಿ ವಾಸ್ತವ್ಯದ ವ್ಯವಸ್ಥೆಯನ್ನು ಏರ್‌ ಇಂಡಿಯಾ ಸಂಸ್ಥೆ ಮಾಡಿದೆ.

ಈ ಪ್ರಯಾಣಿಕರಿಗೆ ಬುಧವಾರ ಬೆಳಗ್ಗೆ 6 ಗಂಟೆಗೆ ಮುಂಬಯಿ ಪ್ರಯಾಣಕ್ಕೆ ವಿಮಾನದ ವ್ಯವಸ್ಥೆ ಕಲ್ಪಿಸು ವುದಾಗಿ ಏರ್‌ ಇಂಡಿಯಾ ಭರವಸೆ ನೀಡಿದೆೆ.

Advertisement

Udayavani is now on Telegram. Click here to join our channel and stay updated with the latest news.

Next