Advertisement

ಏರ್‌ ಇಂಡಿಯಾದಿಂದ ‘ನಮಸ್ಕಾರ್‌ ಸೇವಾ’

03:58 AM Sep 06, 2019 | Team Udayavani |

ಮುಂಬಯಿ: ಇನ್ನು ಏರ್‌ ಇಂಡಿಯಾ ವಿಮಾನದ ಟಿಕೆಟ್ ಬುಕ್‌ ಮಾಡಿದರೆ, ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗಿನಿಂದ ವಿಮಾನವನ್ನೇರುವ ವರೆಗೂ ಜೊತಗೇ ಆಗಮಿಸಿ ಸಹಾಯ ಮಾಡುವ ಸಿಬಂದಿಯೂ ಲಭ್ಯವಿರುತ್ತಾರೆ.

Advertisement

ಇದಕ್ಕಾಗಿ ಏರ್‌ ಇಂಡಿಯಾ ನಮಸ್ಕಾರ್‌ ಸೇವಾ ಎಂಬ ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಲಿದ್ದು, ಇದರ ಅಡಿಯಲ್ಲಿ ಸಿಬಂದಿ ಯೊಬ್ಬರು ಪ್ರಯಾಣಿಕರ ಜೊತೆಗೆ ಆಗಮಿಸಿ ಬೋರ್ಡಿಂಗ್‌ ಪಾಸ್‌ ತೆಗೆದುಕೊಳ್ಳುವುದರಿಂದ ಆರಂಭಿಸಿ, ಭದ್ರತಾ ತಪಾಸಣೆ ಹಾಗೂ ವಿಮಾನವನ್ನು ಏರುವವರೆಗೂ ಸಹಾಯ ಮಾಡುತ್ತಾರೆ.

ಏರ್‌ ಇಂಡಿಯಾದಲ್ಲಿ ಸೇವೆ ಉತ್ತಮವಾಗಿಲ್ಲ ಎಂಬ ದೂರುಗಳು ಪದೇ ಪದೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ಕನಿಷ್ಠ ಶುಲ್ಕದೊಂದಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಈ ಸೇವೆ ಪ್ರಸ್ತುತ ಪ್ರಥಮ ದರ್ಜೆ ಗ್ರಾಹಕರಿಗೆ ಲಭ್ಯವಿದೆ. ಈಗ ಈ ಸೇವೆಯನ್ನು ಆರಂಭದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬ್ಯುಸಿನೆಸ್‌ ಹಾಗೂ ಎಕಾನಮಿ ದರ್ಜೆ ಪ್ರಯಾಣಿಕರಿಗೂ ವಿಸ್ತರಿಸಲಾಗುತ್ತದೆ. ನಂತರ ಬೆಂಗಳೂರು ಸೇರಿದಂತೆ ಇತರ ಏರ್‌ಪೋರ್ಟ್‌ಗಳಿಗೂ ವಿಸ್ತರಿಸಲಾಗುತ್ತದೆ ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next